Friday, July 05, 2024

Mounting Up the Saddle ಸ್ಯಾಡ್ಲ್ ಪೀಕ್ ಚಾರಣದ ಹೂರಣ: ಭಾಗ ೧

ಪೀಠಿಕೆ ಮತ್ತು ಸಿದ್ಧತೆ: 'ಇದೇನು ಯುದ್ಧಕ್ಕೆ ತಯಾರಿಯೇ?'

Prologue and Preparations: "Feels like I'm Off to a Battle!"

"ಈಗಿರೋ ತೊಂದ್ರೆಗಳು ಸಾಲ್ದಾ? ಇನ್ನೂ ಬೆಟ್ಟ ಹತ್ತೋ ಆಸೆ ಯಾಕೆ" ಅಮ್ಮ ಫೋನ್ ನಲ್ಲಿ  ಗದರಿದಳು. ಎಲ್ಲಿ ಹೋಗುವುದಿದ್ದರೂ ತಂದೆ-ತಾಯಿಗೆ ತಿಳಿಸಿಯೇ ಹೋಗುವುದು ಮುಂದಿನಿಂದಲೂ ರೂಢಿಯಾಗಿತ್ತು.  ಹೇಳದೆ ಹೋದರೆ ಏನಾಗುತ್ತೋ ಅನ್ನೋ ಭಯ ಸಹ ಇರುತ್ತೆ ಅಲ್ಲವೇ? ಹೋದ ವರ್ಷ ಇದೆ ಸಮಯಕ್ಕೆ ನನ್ನ ಮೊಣಕಾಲಿಗೆ ಇನ್ನೊಂದು ಸರ್ಜರಿ ಆಗಿತ್ತು; ಅಮ್ಮ ಅದನ್ನೇ ನೆನಪಿಸಿದಳು.  "ಕಷ್ಟ ಅನ್ಸಿದ್ರೆ ಹತ್ತೋಲ್ಲ ಅಮ್ಮಾ", ಎಂದೆ.  "ಎಷ್ಟು ಹೇಳಿದ್ರೂ ಕೇಳಲ್ಲ. ಏನಾದ್ರೂ ಮಾಡ್ಕೋ", ಅಮ್ಮ ಗೊಣಗುತ್ತಲೇ ಫೋನ್ ಇಟ್ಟಳು.  

"You've just recovered recently.  Aren't the troubles you already have enough to deal with?What's the need to scale a peak?" mom expressed her concern and disapproval.  I preferred to inform parents before heading out anywhere; there always lurked a fear inside me that some terrible fate would await me if I wouldn't inform. "Don't worry mom.  If I find it difficult to climb, I'll return without trying too hard".  She wasn't impressed.  "Do whatever you feel like.  When have you heeded to any good advice?", she grumbled as she disconnected the call.  

ಯಾವುದು ಕಷ್ಟವೋ, ಬೇಡ ಎಂಬ ಉತ್ತರ ಸಿಗುತ್ತೋ ಅದನ್ನೇ ಮಾಡುವ ಬಯಕೆ ಮನುಷ್ಯನಿಗೆ ಯಾಕೆ ಬರುತ್ತೋ ನಾ ಕಾಣೆ.  ಎಲ್ಲ ಮನುಷ್ಯರೂ ಹೀಗೋ ಅಥವಾ ಕೆಲವರು ಮಾತ್ರವೇ ಹೀಗೆ ಆಡ್ತಾರೋ ಗೊತ್ತಿಲ್ಲ.  ನಾನೇನೂ ಮುಂಚಿನಿಂದ ಹೀಗಿರ್ಲಿಲ್ಲ.  ಚಿಕ್ಕವನಿದ್ದಾಗ ನನ್ನ ಕೈಲಿ ಏನೂ ಆಗ್ತಾ ಇರ್ಲಿಲ್ಲ.  ಯಾವ ಆಟ ಆಡಿದ ನೆನಪು ನಂಗಿಲ್ಲ.  ಸೈಕಲ್ ತುಳಿಯುವುದು ಕಲಿಯೋಕೂ ಕಷ್ಟ ಪಟ್ಟಿದ್ದೆ.  ಬರೀ ಪುಸ್ತಕ ಕೈಲಿ ಹಿಡಿದು ಅದು ತೋರುವ ಜಗತ್ತಲ್ಲಿ ಕಳೆದು ಹೋಗ್ತಾ ಇದ್ದೆ.  ೨೧ರ ಹರೆಯದಲ್ಲೂ ೫೦ ಕೆಜಿ ತೂಕ ಇರ್ಲಿಲ್ಲ ನಾನು.  ಇನ್ನೆಂಥ ಸಾಹಸ ನನ್ನಿಂದ ಆಗ್ತಾ ಇತ್ತು!! ಹೀಗೆ ಏನೂ ಆಗದವನಂತೆ ಇದ್ದ ನಾನು ಇದ್ದಕ್ಕಿದ್ದಂತೆ ಮುಪ್ಪು ಬರುವಂಥ ವಯಸ್ಸಲ್ಲಿ ಬೆಟ್ಟ, ಗುಡ್ಡ, ಈಜು, ಓಟ ಎಂದು ತಿರುಗಿದರೆ ಹೆತ್ತವರಿಗೂ ಏನೋ ಆಗಿದೆ ಇವನಿಗೆ ಅನ್ಸೋದು ಸಾಮಾನ್ಯನೇ.  

Why do people try to do what is difficult or forbidden? What kind of satisfaction is hidden inside in attempting to crack a tough nut? Are all people similar in this aspect, or is it just a few? I don't know about others, but I wasn't always like this.  As a puny child while growing up, even learning how to cycle was a huge task for me, and something that I didn't relish but only learnt because of the ridicule faced.  I would usually be found lost in the world of books while growing up.  As someone who weighed less than 50 kg when I became an adult at 21, even if I desired to, adventure wasn't exactly something I could attempt! Now, when I was nearing my age of retirement I wanted to try new things, scale a peak here, or attempt a marathon there, even learn swimming and try diving into the ocean.  No wonder my mom wasn't too impressed.  

ಹೌದು, ಇದ್ದಕ್ಕಿದ್ದಂತೆ ಈ ತರದ ಬದಲಾವಣೆ ಹೇಗೆ ಬಂತು ಅಂತ ಕೇಳ್ತೀರಾ? ಅದನ್ನ ಇನ್ನೊಂದು ಬರೆಹಕ್ಕೆ ಇಟ್ಟುಕೊಳ್ಳೋಣ.  ಇಲ್ಲ ಅಂದ್ರೆ ಅದೇ ದೊಡ್ಡ ಕಥೆ ಆಗುತ್ತೆ! ಸಧ್ಯಕ್ಕೆ ಈ ಲೇಖನವನ್ನ ಬರೀ ನನ್ನ ದಿಗ್ಲಿಪುರದ ಪುರಾಣದ ಬಗ್ಗೆ ಬರೆಯಲು ಉಪಯೋಗಿಸುತ್ತೇನೆ.  

I will refrain from narrating how I became an active person interested in fitness and sport from an absolute bookworm.  I don't even know if it would make interesting reading.  Maybe I will keep it for another day, even if I choose to write about it.  For now, my focus is on narrating my dalliance with Diglipur (should I call this piece, 'the Dance of Diglipur', considering my almost obsessive, unhealthy penchant for puns or rhymes?).

ದಿಗ್ಲಿಪುರ ಅಂಡಮಾನ್ ದ್ವೀಪಗಳ ಅತ್ಯಂತ ಉತ್ತರಕ್ಕೆ ಇರುವ ಊರು.  ಊರು ಅನ್ನೋಕಿಂತ ಹೋಬಳಿ-ಗ್ರಾಮ ಅಂದರೂ ನಡೆಯುತ್ತೆ.  ಆದರೆ, ಉತ್ತರ ಮತ್ತು ಮಧ್ಯ ಅಂಡಮಾನ್ ದ್ವೀಪಗಳಲ್ಲಿ ಇದೆ ದೊಡ್ಡ ಊರು. ಇದನ್ನು ಬಿಟ್ಟರೆ ಮಾಯಾಬಂದರ್ - ಇದು ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲಾ ಕೇಂದ್ರವೂ ಹೌದು.  ಇಲ್ಲಿಯೂ ಸಹ ನಂಗೆ ಆಫೀಸ್ ಇದೆ. ಇಲ್ಲಿಗೂ ಕೆಲ್ಸದ್ ಮೇಲೆ ಹೋಗ್ಬೇಕಾಗುತ್ತೆ.  ಹಾಗೇನೇ ಮುಂದಿನ ಸಲ ಕೆಲಸದ ಮೇಲೆ ಹೋದಾಗ ಅಲ್ಲಿನ ಬೆಟ್ಟ ಹತ್ತಬೇಕು ಅಂತ ತೀರ್ಮಾನಿಸಿದ್ದೆ.  ಅದೇ ರೀತಿ ಯಾವುದೊ ಎಮರ್ಜೆನ್ಸಿ ಕೆಲಸಗಳ ಇನ್ಸ್ಪೆಕ್ಷನ್ ಮಾಡಬೇಕಿತ್ತು.  ದಿಗ್ಲಿಪುರಕ್ಕೆ ಹೋಗುವ ಪ್ಲಾನ್ ಸಿದ್ಧ ಆಯಿತು.  ಮಳೆಗಾಲ ಮೊದಲಾಗೋ ಮುಂಚೆ ಮುಗಿಸಬೇಕು ಅನ್ನೋ ತವಕ ಸಹ ಇತ್ತು.  ಇಲ್ಲ ಅಂದ್ರೆ ಮತ್ತೆ ನವೆಂಬರ್ ತಿಂಗಳ ವರೆಗೂ ಕಾಯಬೇಕು ಹತ್ತೋಕೆ.  ಅದು ಆಗದ ಮಾತು ಅಂತ ಅನ್ಸಿತ್ತು - ನನ್ನ ವರ್ಗಾವಣೆ ಅದಕ್ಕೆ ಮುಂಚೆ ಆಗುವ ಸಂಭವ ಇದೆ ಅಂತ ತಿಳಿದಿತ್ತು.  ಜತೆಗೆ ನನ್ನೊಂದಿಗೆ ಕೆಲಸ ಮಾಡ್ತಿದ್ದ ನನ್ನ ಉಪ ಸಲಹೆಗಾರ ಅಧಿಕಾರಿ ದಿಲೀಪ್ ಅವರ  ವರ್ಗಾವಣೆಯ ಆದೇಶ ಬಂದಿತ್ತು.  ಅವರಿಗೂ ದಿಗ್ಲಿಪುರಕ್ಕೆ ಹೋಗುವ ಆಸೆ ಇತ್ತು.  ಕೋಸ್ಟ್ ಗಾರ್ಡ್ ಆಫೀಸ್ ಗಳಿಗೆ  ದಿಲೀಪ್ ವಿತ್ತೀಯ ಸಲಹೆ ನೀಡುತ್ತಿದ್ದರು, ಮತ್ತು ದಿಗ್ಲಿಪುರದಲ್ಲಿ ಎಲ್ಲಕ್ಕಿಂತ ದೊಡ್ಡ ಆಫೀಸ್ ಕೋಸ್ಟ್ ಗಾರ್ಡ್ನದ್ದು ಆಗಿತ್ತು.  ಅವರೇ ತಟರಕ್ಷಕ ದಳಕ್ಕೆ ಫೋನಾಯಿಸಿ ಅಲ್ಲಿಗೆ ಡೊರ್ನಿಯರ್  ವಿಮಾನದಲ್ಲಿ ಹೋಗಿಬರುವ ವ್ಯವಸ್ಥೆ ಮಾಡಿದರು.  


An amoeba-like island on the way to Diglipur

Diglipur is the northernmost town in the Andaman Islands.  You will even get away by calling it a village.  The town barely has a few streets and a few thousand population.  But, then it is the biggest in the entire North and Middle Andaman district, even though Mayabunder is the district headquarter.  I have sub-offices here too, and sometimes have to visit them, to monitor the works in progress.  When I was here last, I had decided that if I ever visit this place again on work, I would also attempt to climb the Saddle Peak.  As luck would have it, an opportunity came by to inspect certain emergency works and clear them from financial angle; we thought we might finish it before the onset of monsoon.  Else, it would not be possible to go before end of October. Plus, there were rumours that my transfer might come before time; in addition, my Deputy, Dilip's transfer orders had already arrived and he too wanted to be in Diglipur one last time before his departure to Mumbai. Plans were made quickly, and Dilip took up the responsibility to arrange for the transport (read: plane) through Coast Guard, since he was their de facto financial adviser; also, Coast Guard had the largest office in Diglipur.


ಪೋರ್ಟ್ ಬ್ಲೇರ್ ಗೆ ಬರುವ ಮುನ್ನ ನನಗೆ ಈ ಜಾಗಗಳ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಕೇವಲ ಇಂದಿರಾ ಪಾಯಿಂಟ್ ಬಗ್ಗೆ ಮಾತ್ರ ಗೊತ್ತಿತ್ತು.  ಅಲ್ಲಿಗೆ ಹೋಗಬೇಕೆಂಬ ಆಸೆ ಸಹ ಇತ್ತು.  ಆಗುತ್ತೋ ಇಲ್ಲವೋ ಗೊತ್ತಿರಲಿಲ್ಲ.  ಆದರೆ ದಿಗ್ಲಿಪುರ್, ಮತ್ತು ಅಲ್ಲಿನ ಸ್ಯಾಡ್ಲ್ ಬೆಟ್ಟದ ಬಗ್ಗೆಯಾಗಲಿ ಅಥವಾ ನಾರ್ಕೊಂಡಂ ದ್ವೀಪದ ಬಗ್ಗೆಯಾಗಲಿ ಏನೂ ಅರಿವಿರಲಿಲ್ಲ. ಸ್ಯಾಡ್ಲ್ ಪೀಕ್/ಬೆಟ್ಟ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿನ ಅತಿ ಎತ್ತರದ ಜಾಗ.  ನಾರ್ಕೊಂಡಂ  ದ್ವೀಪದಲ್ಲಿ ಒಂದು ಸುಪ್ತ ಜ್ವಾಲಾಮುಖಿಯೊಂದಿದೆ; ಮತ್ತು ಪ್ರಪಂಚದ ಬೇರೆಲ್ಲಿಯೂ ಕಂಡು ಬಾರದಂತ ಹಾರ್ನ್ ಬಿಲ್ (ಮಂಗಟ್ಟೆ) ಪಕ್ಷಿಯು ಇಲ್ಲಿ ಕಾಣಸಿಗುತ್ತೆ.  ನಾರ್ಕೊಂಡಂ ದ್ವೀಪಕ್ಕೆ  ಹೋಗಲು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಂಡಂಥ ಒಂದು ಕಾರ್ಯಕ್ರಮ ಬೇರೊಂದು ಕೆಲಸದ ಕಾರಣ ಕೈ ಬಿಡಬೇಕಾಯಿತು.  

Before arriving in Port Blair, I didn't have much idea about these places beyond the Capital of the Union Territory, and the Indira Point, the southernmost point of India.  I had not known about Saddle Peak nor about Narkondam, the island which housed a dormant volcano and an endemic species of hornbill named after the island.  Narkondam hornbill is not found anywhere else in the world.  Though a program was made in February to visit Narkondam with the help of Coast Guard and the Forest Department, it had to be dropped at the last minute due to some work related emergencies.  

Saddle Peak sure was not a thing on my bucket list.  Nor had I originally thought of doing it after being posted to the islands.  However, after walking up the Mount Harriet (now, Mount Manipur), the highest point in Port Blair, and Munda Pahad (this one for personally important reasons, which I might divulge another day), the desire to scale the Saddle Peak sprouted unbeknownst.  I have not done any serious climbing in a long while.  The last one was during the covid, when I went with a group to climb up to the Bannanje Falls, in the Western Ghats.  That was some experience.  All through that climb it rained and we were all soaked to the bones.  It was organised - surprisingly - done during the monsoons and one can't expect anything but downpour in the Malnad during that  time. The entire trek had taken about 7 hours for me (I was the oldest in the group, but had finished the earliest).  But, then it was before I contracted covid, not once but three times.  And, before my second knee surgery.  Before my ability to run a 10K went away like the light in darkness suddenly after those bouts of covid.   

ದಿಲೀಪ್ ಫೋನ್ ಮಾಡಿ "ಸರ್, ನಾಳೆ ಬೆಳಿಗ್ಗೆ ೯;೩೦ಕ್ಕೆ ವಿಮಾನ ಹೊರಡುತ್ತೆ.  ಅದಕ್ಕೂ ಮುಂಚೆ ನಿಮ್ಮನ್ನು ವಿಮಾನ ನಿಲ್ದಾಣದ ಡಿ ಐ ಜಿ ಬೆಳಗಿನ ತಿಂಡಿಗೆ ಆಹ್ವಾನಿಸಿದ್ದಾರೆ".  ವಿಮಾನ ಸ್ಥಾನದ ಮುಖ್ಯಸ್ಥರಾದ ಈ ಡಿ ಐ ಜಿ ಅವರ ಕರೆಯೂ ಬಂದಿತ್ತು. "ಸರ್, ಹಿಂದಿನ ಸಲ ನೀವು ಇಲ್ಲಿಂದ ಯಾನ ಮಾಡಿದಾಗ ನಾನಿರಲಿಲ್ಲ. ಈ ಸಲವಾದರೂ ನಿಮ್ಮನ್ನ ಭೇಟಿಯಾಗಬಹುದಾ?" ಎಂದಿದ್ದರು.  ವಿಮಾನ ಹಾರುವ ಮುಂಚೆ ಅವರನ್ನು ಸಂಧಿಸಲು ಒಪ್ಪಿಗೆ ನೀಡಿದ್ದೆ.  

"Good morning Sir".  It was Dilip on the phone.  "Dornier will fly us to Diglipur tomorrow at 9:30AM.  Before that, we have been asked by the Air Station Commandant to join him for breakfast".  There were separate messages from the Commandant too requesting him to join him and I had assented.  "Sir, the last time you had flown out from here, I was away on work.  I hope I get to meet you this time", he had said. 

ದಿಗ್ಲಿಪುರದಲ್ಲಿ ನನಗೆ ನೋಡಲು ಇನ್ನೊಂದು ಜಾಗವಿತ್ತು.  ನೆಲದ ಮೇಲಲ್ಲ.  ಬಾನಿಂದ.  ರೋಸ್ ಮತ್ತು ಸ್ಮಿಥ್ ಎಂಬ ಅವಳಿ ದ್ವೀಪಗಳು ದಿಗ್ಲಿಪುರದ ಸಮುದ್ರದಲ್ಲಿವೆ. ಈ ಎರಡು ದ್ವೀಪಗಳ ನಡುವೆ ಪ್ರಾಕೃತಿಕವಾಗಿ ಮರಳಿನ ಸೇತುವೆಯೊಂದಿದೆ. ಕಡಲು ಉಬ್ಬರಿಸಿದಾಗ (ಹೈ ಟೈಡ್) ಈ ಮರಳಿನ ಸೇತುವೆ ಮುಚ್ಚಿ ಹೋಗುತ್ತೆ. ಉಬ್ಬರ ಇಳಿದಾಗ (ಲೊ ಟೈಡ್) ಮರಳ ಸೇತುವೆ (ಅಥವಾ ಸರಳು/ಪಟ್ಟಿ) ಮರಳಿ ಕಾಣುತ್ತೆ. ಆಗ ಇದರ ಮೇಲೆ ನಡೆದು ಜನ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗಬಹುದು, ಬರಬಹುದು.  ಈ ಎರಡು ಅವಳಿ ದ್ವೀಪಗಳು ಮತ್ತು ಅವುಗಳನ್ನು ಜೊತೆ ಮಾಡುವ ಈ ಮರಳು ಕೊಂಡಿಯನ್ನು ನನಗೆ ಮೇಲಿನಿಂದ ನೋಡಿ, ಅವುಗಳ ಚಿತ್ರ ತೆಗೆಯುವ ಕನಸಿತ್ತು.  ಡಿ ಐ ಜಿಯೊಂದಿಗೆ ಕಲೆತಾಗ ಅವರಿಗೆ ನನ್ನ ಇಚ್ಚೆಯನ್ನು ತಿಳಿಸಿದೆ.  ಅವರು ವಿಮಾನ ಚಾಲಕರನ್ನು ಕರೆದು ಅವರಿಗೆ ಸೂಕ್ತವಾದ ಸೂಚನೆಗಳನ್ನು ಇತ್ತರು.  ನೋಡುವ ಮುಂಚೆಯೇ ನನ್ನ ಆನಂದ ಗಗನ ಮುಟ್ಟಿತ್ತು.  

The ground below from above


I had another place to see in Diglipur.  Not over land.  But from the skies.  Ross and Smith Islands are twin islands, just off the Diglipur coast.  They are connected by a sandbar.  During high tide, this sandbar gets submerged under tidal waters, and during low tide this lays exposed, and allows for people to walk from one island to another.  From the time I learnt about these islands, I so wished to see them - the islands and the sandbar - from the skies, and capture the pictures for my forever memories.  I expressed my desire to the Commandant; he called the pilot over, and gave him suitable instructions regarding the same.  My joy was touching the sky even before we had taken off. 

ಪೋರ್ಟ್ ಬ್ಲೇರ್ ನಿಂದ ದಿಗ್ಲಿಪುರಕ್ಕೆ ರಸ್ತೆ ಇದೆ.  ಎರಡು ಊರುಗಳ ನಡುವಿನ ದೂರ ಕೇವಲ ಮುನ್ನೂರು ಕಿಲೋಮೀಟರ್ ಆದರೂ ರಸ್ತೆ ಚೆನ್ನಾಗಿಲ್ಲದ ಕಾರಣ, ದಿನವೆಲ್ಲ ಪ್ರಯಾಣ ಮಾಡಬೇಕು ತಲುಪಲು.  ಹಾಗೂ, ಜರಾವಾ ಬುಡಕಟ್ಟು ಜನ ಇರುವ ಕಾಡಿನ ಮೂಲಕ ಸಾಗುವುದರಿಂದ ನಾವು (ಯಾರಾದರೂ ಸಹ) ಅರಣ್ಯ ಇಲಾಖೆ ಮತ್ತು ಪೊಲೀಸ್ ಬೆಂಗಾವಲಿನೊಂದಿಗೆ ಮಾತ್ರ ಸಂಚರಿಸಬೇಕು.  ಆದ್ದರಿಂದ, ಕೆಲಸದ ನಿಮಿತ್ತ ದಿಗ್ಲಿಪುರ ಅಥವಾ ಮಯಬಂದರ್ ಕೇವಲ ವಿಮಾನದಲ್ಲಿ ಹೋಗುವುದೇ  ಸೂಕ್ತ ಆಗಿತ್ತು.  ವಿಮಾನದಲ್ಲಿ ಈ ಪ್ರಯಾಣ ಕೇವಲ ಮುಕ್ಕಾಲು ಅಥವಾ ಒಂದು ಗಂಟೆಯಲ್ಲಿ ಮುಗಿಯುತ್ತೆ. ಹೆಚ್ಚಿನ ಎತ್ತರದಲ್ಲಿ ಹಾರದ ಕಾರಣ, ಸುತ್ತಲಿನ ದ್ವೀಪ, ಸಮುದ್ರವನ್ನು ನೋಡುತ್ತಾ ಹೋಗುವುದು ಕೂಡ ಆಹ್ಲಾದಕರ ಅನುಭವ.  

One could go to Diglipur from Port Blair by road too.  The distance between the two is just over 300 km.  However, the road is generally in terrible condition, and it takes an entire day to traverse this distance.  Also, one has to go through the restrict tribal area of the Jarawas, where one has to only travel along with the convoy of the police and the forest department.  Hence, if there is work to attend to in Diglipur or Mayabunder, it is best to fly (since one is entitled to). It also is an exhilerating experience to watch the seas and the islands from above as you fly.  

ದಿಗ್ಲಿಪುರದ ವಿಮಾನ ನಿಲ್ದಾಣ ದಾಟಿ ಕೊಂಚ ಮುಂದಕ್ಕೆ ಹೋದರೆ ಅವಳಿ ದ್ವೀಪಗಳು ಕಾಣುತ್ತವೆ. ಅವು ಕಾಣುತ್ತಿದ್ದಂತೆಯೇ, ಮುಂದೆಯೇ ಕೊಟ್ಟ ಸೂಚನೆಯಂತೆ ವಿಮಾನ ಚಾಲಕ ವಿಮಾನವನ್ನು ಆರು ಸಾವಿರ ಅಡಿಗಳಿಂದ ಕೇವಲ ಎರಡು ಸಾವಿರ ಅಡಿಗಳಿಗೆ  ಇಳಿಸಿದರು. ಈ ಅವಳಿ ದ್ವೀಪಗಳು ಮತ್ತು ಮರಳ ಸೇತುವೆಯನ್ನು ನೋಡುವ ಆನಂದ ನಂಗೆ ವರ್ಣಿಸೋಕೆ ಬರಲ್ಲ.  ಇಲ್ಲಿಯೇ ಕೆಲವು ಚಿತ್ರಗಳನ್ನು ಇರಿಸುತ್ತೇನೆ.  ನೀವೇ ನೋಡಿ ತಿಳ್ಕೊಬಹುದು, ಎಷ್ಟು ಚೆನ್ನಾಗಿದೆ ಅಂತ.  ಇವುಗಳ ಚಿತ್ರ ಹಿಡಿಯಲು ನಾನು ಇನ್ನೊಬ್ಬರಿಂದ ಕ್ಯಾಮೆರಾ ಎರವಲು ತಂದಿದ್ದೆ.  ನನ್ನ ಕ್ಯಾಮೆರಾದಲ್ಲಿ ಫಂಗಸ್ ಬೆಳೆದಿತ್ತು; ಆ ಕಾರಣ ಕ್ಯಾಮೆರಾ ಮತ್ತು ಲೆನ್ಸ್ ರಿಪೇರಿಗಾಗಿ ಬೆಂಗಳೂರು ಸೇರಿದ್ದವು. ಎರವಲು ಪಡೆದ ಕ್ಯಾಮೆರಾ ಅಷ್ಟು ಚೆನ್ನಾಗಿರಲಿಲ್ಲ, ಆದ್ರೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಚಿತ್ರಗಳನ್ನು ಹಿಡಿದೆ.  ಸುಮಾರ್ ೧೦ ನಿಮಿಷ ವಿಮಾನವನ್ನು ದ್ವೀಪಗಳ ಸುತ್ತಲೇ ನಮಗಾಗಿ ಹಾರಿಸಿದ್ದರಿಂದ ನನಗೆ ಕಣ್ಣು ಮನಸ್ಸು ತುಂಬುವಷ್ಟು ಅವನ್ನೇ ನೋಡಿ ಕಾಲ ಕಳೆದೆ.  

Ross and Smith Islands 



The plane must go beyond the Diglipur Air Station to view the islands from air.  As we approached the twin islands, the pilot brought down the aircraft to a lower altitude, as had been advised. The sight of the islands and the connecting sandbar is out of the world.  It was low tide, and one could clearly see the exposed sandbar connecting the two islands, Ross and Smith.  I had borrowed a camera from a friend to click pictures, as my camera and lenses were fungus infected and I had given them for servicing in Bengaluru. The camera I had borrowed was not great, but I clicked as many pics as possible.  I soaked up the sight to a great extent, as the pilot circled around the islands for a while.  I would simply upload pictures than describe their beauty.  

Can't get enough of the beauty. 


ವಿಮಾನದಿಂದ ಇಳಿದು ವಸತಿ ಮನೆಗೆ ಹೋಗಿ ಕೊಂಚ ವಿಶ್ರಮಿಸಿ ಆ ದಿನದ ಎಲ್ಲ ಕೆಲಸಗಳನ್ನ  ಮಾಡಿದ್ದಾಯಿತು.  ಆ ನಂತರ, ಇನ್ನೂ ಬೆಳಕಿದ್ದ ಕಾರಣ ಹತ್ತಿರದ ಕಡಲ ತೀರವೊಂದಕ್ಕೆ ಹೋಗಿ ಬಂದೆವು.  ಅಲ್ಲಿಂದ ನಾವು ಹತ್ತಬೇಕೆಂದುಕೊಂಡಿದ್ದ ಗುಡ್ಡ ಕಾಣುತ್ತಿತ್ತು.  "ಒಹ್ ಇಷ್ಟೇ ಎತ್ತರ ಇರೋದು.  ಭಾರಿ ಸುಲಭ"  ಆದ್ರೆ ನಮ್ಮ ಕಾರ್ ಡ್ರೈವರ್ ಮತ್ತು ಇತರರನ್ನು ಕೇಳಿದರೆ, ಹತ್ತಿ ಇಳಿಯಲು ಇಡೀ ದಿನವೇ ಬೇಕು ಅಂತ ಹೇಳಿದ್ರು.  ನಮಗಿಂತ ಮುಂಚೆ ಹೋಗಿದ್ದೆ ಇನ್ನೊಬ್ಬ ಅಧಿಕಾರಿ ಕೂಡ ಇದೆ ರೀತಿ ಹೇಳಿದ್ದ.  ನನಗೆ ನಂಬಲು ಕಷ್ಟ ಆಯಿತು.  "ಸರಿ ನನ್ನ ಮುಖ ನೋಡಿ ವಯಸ್ಸಾಗಿದೆ ಅಂತ ಈ ಥರ ಹೇಳ್ತ ಇದ್ದಾರೆ." ಅಂತ ಯೋಚನೆ ಮಾಡಿ ಸುಮ್ಮನಾದೆ.  


Kalipur Beach with Saddle Peak in the background



Once the flight landed, we moved immediately to the guesthouse.  After resting for a while, we got all the work we had come for completed.  Since there was still time for the sunset, we decided to visit a nearby beach, called Kalipur beach.  One could see the hillock we had planned to climb the next day.  "It's a piddly, little tor.  It would be a cakewalk", I thought.  However, our driver and others that we spoke to said it would take the entire day to scale and return.  Even another officer who had previously climbed it echoed the same sentiments.  I could not believe their words.  I assumed they were saying so because of my age and possible inability/infirmity.  

ಕತ್ತಲಾದ ನಂತರ ನನಗೆ ನಾಳೆ ಹತ್ತುವುದೋ ಬೇಡವೋ ಎಂಬ ಆಲೋಚನೆ ಮೊದಲಾಯಿತು.  ಮೋಡ ಕವಿದಿತ್ತು.  ಯಾವಾಗಲಾದರೂ ಮಳೆ ಬರೋ ಸಾಧ್ಯತೆ ಕಾಣಿಸ್ತಿತ್ತು.  ಮಳೆಯಲ್ಲಿ ಬೆಟ್ಟ ಹತ್ತೋದು ಕಷ್ಟ ಮಾತ್ರ ಅಲ್ಲ, ಪ್ರಮಾದಕಾರಿ ಕೂಡ.  "ಹೊರಡೋಕೆ ಮುಂಚೆ ಮಳೆ ಕಾಣಿಸಿದರೆ ಹತ್ತೋ ಯೋಚನೆ ಬಿಟ್ಟು ಇಲ್ಲೇ ಇರೋಣ.  ದಟ್ಟ ಮೋಡ ಇಲ್ಲದೆ ಹೋದರೆ ಹೊರಡೋಣ" ಅಂತ ನಿರ್ಧರಿಸಿದೆ.  ಎಲ್ಲಕ್ಕಿಂತ ಹೆಚ್ಚಾಗಿ, ಬೆಳಿಗ್ಗೆ ನಾಲ್ಕಕ್ಕೆ ಎದ್ದು ತಯಾರಾಗಿ ಹೊರಡೋ ಯೋಚನೆ  ಭಯಂಕರವಾಗಿತ್ತು.  ಬೆಳಿಗ್ಗೆ ಬೇಗ ಏಳುವುದೇ ನನಗೆ ಯಾವತ್ತೂ ಇಷ್ಟವಿಲ್ಲದ ಕೆಲಸ.  "ಯಾರು ಈ ಸೂರ್ಯೋದಯ ಅನ್ನೋದನ್ನ ಕಂಡು ಹಿಡಿದ್ರೋ, ಯಾಕೆ ಈ ಬ್ರಾಹ್ಮೀ ಮುಹೂರ್ತ ತುಂಬಾ ಒಳ್ಳೆ ಸಮಯ ಅಂತ ಹೇಳ್ತಾರೋ" ಅಂತ ತುಂಬಾ ಸಲ ಬೈಕೊಂಡಿದ್ದೀನಿ.  

Once the darkness set in, the mind too began having second thoughts about the climb.  There were dark clouds in the sky, and it looked like it could rain anytime.  Trekking when it rains is neither easy nor desired. Above all, waking up at 4 in themorning and getting ready for the trek appeared the most daunting. I hate waking up early in the morning.  Each time I have to wake up early, I have cursed the situation that necessitated it.  "I will stay back if it rains before we start in the morning", I resolved.  

ವಸತಿ ಮನೆಯ ಸಹಾಯಕ "ಬೆಳಿಗ್ಗೆಗೆ ಬುತ್ತಿ ಕಟ್ಟಿ ಕೊಡ್ತೀನಿ ಸರ್.  ಏನು ಬೇಕು?" ಅಂದ.  ಈ ಉಸ್ತುವಾರಿ ಎಲ್ಲ ದಿಲೀಪ್ ಅವರೇ  ನೋಡಿಕೊಳ್ಳೋದು ಒಳ್ಳೇದು ಅನ್ನಿಸ್ತು.  ಹಾಗೆ ಹೇಳಿದೆ.  ನಮ್ಮೊಂದಿಗೆ ಇನ್ನೊಬ್ಬ ಅಧಿಕಾರಿಯನ್ನು ಕಳಿಸುವೆ ಎಂದು ಇಲ್ಲಿಯ ಉಸ್ತುವಾರಿ ಅಧಿಕಾರಿ ಹೇಳಿದ್ದರು.  ನಮ್ಮ ಬುತ್ತಿ ಎತ್ತಿಕೊಂಡು ಜೊತೆಗೆ  ಬರೋದಕ್ಕೆ ಇನ್ನೊಬ್ಬ ಹುಡುಗನ್ನೂ ನೇಮಿಸಿದ್ದರು. ನಮ್ಮ ಜೊತೆ ಬರೋಕೆ ನೇಮಿಸಿದ್ದ ಅಧಿಕಾರಿ ಇನ್ನೂ ಚಿಕ್ಕ ಹುಡುಗನಾಗಿದ್ದ.  ಅವನು ಬಂದು, "ಸರ್ ಬೆಳಿಗ್ಗೆ ೫ ಗಂಟೆಗೆಲ್ಲ ತಯಾರಾಗಿರಿ. ಪೂರ್ತಿ ತೋಳಿನ ಅಂಗಿ ಧರಿಸಿ, ಹಾಗೆಯೆ ಪ್ಯಾಂಟ್ ಹಾಕಿಕೊಂಡು ಬನ್ನಿ.  ಶಾರ್ಟ್ಸ್ ಬೇಡ.  ಬೆಟ್ಟದಲ್ಲಿ ಹಾವುಗಳಿರುವ ಸಾಧ್ಯತೆ ಜಾಸ್ತಿ" ಅಂತ ಹೇಳಿ ಹೋದ.  ಇದೊಂದೇ ಬಾಕಿ ಇತ್ತು, ಅಂತ ಅನ್ನಿಸ್ತು.  ಬೇಗ ಮಲಗಿದರೂ ನಿದ್ದೆ ಸುಳಿಯಲಿಲ್ಲ.  ರಾತ್ರಿಯೆಲ್ಲಾ ಒದ್ದಾಟದಲ್ಲೇ ಕಳೆದಿತ್ತು.  ನಾಲ್ಕು ಗಂಟೆಗೆ ಅಲಾರ್ಮ್ ಬಡ್ಕೊಂಡಾಗ ಏಳೋ ಮನಸ್ಸಂತೂ ಇರ್ಲಿಲ್ಲ.    

The guesthouse attendant asked what food we wanted to be packed for the trek.  I thought and felt it was best to leave all these responsibilities to Dilip, We were informed that an officer would come along with us as the guide to climb the peak; there would be another boy to carry our food pack up the mountain.  Saksham, the officer who was assigned to come along, was young and new in service.  "Sir, please be ready by 5.  Let us leave before it is sunrise.  The earlier we start the better and we could avoid the hot sun in the mid day.  Also, please wear full sleeved shirt, and trousers; no shorts.  There is a possibility that we might encounter snakes in the mountain", he instructed as he left.  Well, this was the only thing left to scare us with.  Even though I retired to bed early, sleep wouldn't come anywhere near.  I tossed and turned through the night, and possibly slept well after midnight.  When the alarm rang at 4, I was not inclined to leave the bed.  


(ಮುಂದುವರೆಯುವುದು.....)

(To be Continued.....)




2 Comments:

At 9:22 PM, Anonymous Anonymous said...

Super sir👌... waiting for the next part.

 
At 4:07 PM, Anonymous Anonymous said...

Awesome description and super photograph Sir, We also visited Diglipur by Ship Sindhu. Amazing view of Ross and Smith ! We all impressed.

 

Post a Comment

<< Home