Life Ordinary
ಇಷ್ಟು ಇನ್ನಷ್ಟು
ಬರೆಯಬೇಕೆಂಬಾಸೆ
ಎಷ್ಟು ಯತ್ನಿಸಿದರೂ
ಬರೆಯಲೊಲ್ಲದು ಜೀವ
ಮನದಲ್ಲಿ ಪುಟಿಯುತ್ತಿವೆ
ಹತ್ತು ಹಲವು ಹೊಸ ಆಲೋಚನೆಗಳು
ಮರದೆತ್ತರದ ಪ್ರತೀಕ್ಷೆ
ಹತ್ತಲೇನೋ ಅಂಜಿಕೆ
ಅಳುಕಿನ ಬಾಳು
ಹಿಡಿದ ನಾಲಿಗೆಯಿಂದ
ಯಾರೂ ಹೊಸತನ್ನು ಸಾಧಿಸರು
ನಾನೂ ಸಹ ಸಾಧಾರಣವಾಗಿಯೇ ಹೋದೆ
0 Comments:
Post a Comment
<< Home