Wednesday, May 13, 2020

ಅನವರತ



ಹಿಡಿಹಿಡಿದು ಜಗ್ಗಿದರೂ
ಬಗೆಬಗೆ ಬೇಡಿದರೂ
ಒಲ್ಲೆನೆನ್ನುವುದು ಮನವು

ಪರಿಪರಿ ಕಾಡಿದರೂ
ಹರಿಹರಿ ಹಾಯ್ದರೂ
ನಿಲ್ಲೆನೆನುವುದು ಜೀವ

ಸರಸರನೆ ಹರಿವೆ ನೀರಂತೆ
ನಿರಂತರ ನಡೆವುದೇ ರೀತಿ
ಝಗಝಗ್ಗನೆ ಹೊಳೆವ ರವಿಯಂತೆ
ಅನಂತವಿಹುದು ಪ್ರೀತಿ 



0 Comments:

Post a Comment

<< Home