Monday, July 13, 2020

It's Human to be Humorous!

ಅಪ್ಪ ಎಂದರೆ ಯಾರಿಗೆ ಇಷ್ಟ ಇರುವುದಿಲ್ಲ! ಎಲ್ಲರೂ ತಮ್ಮ ಅಪ್ಪಂದಿರ ದೊಡ್ಡತನ, ಧೈರ್ಯ, ಗಾಂಭೀರ್ಯ ಮತ್ತು ತ್ಯಾಗಗಳನ್ನು ನೆನೆಯುವುದು, ಹಾಗೂ ಅವುಗಳ ಬಗ್ಗೆ ಮಾತನಾಡುವುದು ಸಹಜ.  ನಮ್ಮ ತಂದೆಯೂ ಹಾಗೆಯೆ. ಆದರೆ ನಮ್ಮ ತಂದೆಯ ವ್ಯಕ್ತಿತ್ವ ಸ್ವಲ್ಪ ವಿರಳವಾದದ್ದು. ನಾವು ಯಾರಾದರೂ ಜೋರಾಗಿ ನಕ್ಕರೆ ಅವರಿಗೆ ಹಿಡಿಸದು.  ನಕ್ಕರೆ ಮಂದಹಾಸವಾಗಿರಬೇಕು ಅಭಾಸವಾಗಬಾರದು ಎಂಬುದು ಅವರ ಅಂಬೋಣ.

Everyone would be proud of their fathers.  When asked we all would gladly remember and relate stories of our dads' generosity, courage, demeanor, and their sacrifices to bring us up.  My dad is no exception.  However, there are peculiarities to his nature.  He does not like anyone laughing loudly.  He frowned at us when we guffawed.  He expected us to laugh silently and not make a ruckus!

ಹಾಗೆಂದು ಅವರಿಗೆ ಹಾಸ್ಯ ಪ್ರಜ್ಞೆ ಇಲ್ಲ ಎಂದಲ್ಲ.  ಅವರ ಹಾಸ್ಯವೂ ಅವರಂತೆಯೇ ಸ್ವಲ್ಪ ಬೇರೆಯೇ ತರನದು.  ಅದನ್ನು ಇಲ್ಲಿ ಕೆಲವು ಘಟನೆಗಳೊಂದಿಗೆ ನಿರೂಪಿಸಲು ಇಚ್ಛಿಸಿತ್ತೇನೆ.

That didn't mean dad did not have a sense of humour.  He did! Just that it expressed itself differently, like him.  I would like to narrate a few incidents when his humour and wit sparkled and left us in splits. 

ಒಮ್ಮೆ ನಾನು ತಲ್ಲೀನನಾಗಿ ಹಾಡುತ್ತಿದ್ದೆ.  ನನ್ನ ತಂದೆ ಮುಂದೆಯೇ ಮಂಚದ ಮೇಲೆ ಕುಳಿತು  ಮಂದಹಾಸ ಬೀರುತ್ತಿದ್ದರು.  ಅವರ ಕಿರುನಗೆ ಕಂಡು ನನಗೆ ಇನ್ನೂ ಹುಮ್ಮಸ್ಸು ಬಂದು ಮತ್ತಷ್ಟು ಹಾಡಿದೆ.  ಹಾಡು ಮುಗಿದ ನಂತರ ತಂದೆಯನ್ನು ಕೇಳಿದೆ. "ಪಾ, ನಾನು ಹಾಡಿದ್ದು ಹೇಗಿತ್ತು? ನಿನಗೆ ಹಿಡಿಸಿತಾ?" ನನಗೆ ಅಪ್ಪನ ಮೆಚ್ಚುಗೆ ಬೇಕಿತ್ತು.  ತಂದೆ ಆಗಾಗ ದೇವಸ್ಥಾನದ ಕಚೇರಿಗಳಲ್ಲಿ ಹಾಡುತ್ತಿದ್ದರು.  ಹಾಗೂ ದೇವರ ಹಾಡುಗಳನ್ನು ಬರೆಯುವದು ಅವರ ರೂಢಿ. ನಾವು ಚಿಕ್ಕವರಿದ್ದಾಗ ಅಮ್ಮನ ಮೇಲೆ ಹಾಡುಗಳನ್ನು ಕಟ್ಟುತ್ತಿದ್ದ ದೃಶ್ಯಗಳು ಇನ್ನೂ ನೆನಪಿವೆ.

Once I was singing spiritedly at home.  Dad was sitting nearby on the bed.  I found him looking at me and smiling as I sang.  Assuming he was impressed with my singing, I was inspired to sing even more fervently.  As I finished the song, I couldn't stop myself from asking, "How was it pa? Do you think I sang well?" I wanted his approval as dad sang regularly at the temple concerts.  Plus, he also wrote devotional songs.  I remember vividly, when we were young he would pen songs on my mother.

ಅಪ್ಪ ಮೇಲೆದ್ದು ಬಾಗಿಲ ಕಡೆ ನಡೆದರು.  ಕದ ತೆರೆದು ಒಮ್ಮೆ ಆಚೀಚೆ ನೋಡಿ ಹಿಂದೆ ಬಂದರು.  ನಾನು ಮನದಲ್ಲಿಯೇ ಆಲೋಚಿಸುತ್ತಿದ್ದೆ, ಇದೇನು ಹೀಗೆ ಮಾಡುತ್ತಿದ್ದಾರೆ? ನನ್ನ ಪ್ರಶ್ನೆ ಇವರಿಗೆ ಕೇಳಲಿಲ್ಲವೇ?  "ಯಾಕಪ್ಪ ಏನಾಯಿತು?" ಎಂದು ಸುಮ್ಮನಿರಲಾರದೆ ಕೇಳಿದೆ.  ಅವರು ಹೀಗೆಂದರು.  "ನಿನ್ನವರಾರೂ ಕಾಣಲಿಲ್ಲ.  ಬಂದಿಲ್ಲವೆನಿಸುತ್ತೆ", ಎಂದರು.  ಅಪ್ಪ ನನ್ನವರೆಂದದ್ದು ಕತ್ತೆಗಳನ್ನು ಕುರಿತು.  ನನ್ನ ಸಂಗೀತವನ್ನು ಗಾರ್ದಭಗಳ ಗಾನಕ್ಕೆ ಹೋಲಿಸಿದ್ದರು! ಅಪ್ಪನ ಜೋಕಿಗೆ ನಗಬೇಕೋ ಕೋಪಿಸಿಕೊಳ್ಳಬೇಕೋ ನನಗೆ ತಿಳಿಯಲಿಲ್ಲ. 

Dad got up from the bed and walked towards to the door.  He opened the door, and looked hither and thither, and returned to his seat on the bed.  I wondered what happened. Did he listen to my question at all? I couldn't stay quiet, and asked him, "What happened pa?" "I didn't see any of your co-singers; seems they didn't arrive", he retorted.  He without saying it had compared my singing to the braying of donkeys.  Even as I was left red-faced, I couldn't help but laugh at his joke.

ಇನ್ನೊಮ್ಮೆ ಅಮ್ಮ ಅಪ್ಪನ ಮೇಲೆ ಬೇಸತ್ತು ನನ್ನ ಬಳಿ ದೂರು ಹೇಳುತ್ತಿದ್ದರು.  ಅಪ್ಪ ಪಕ್ಕದಲ್ಲೇ ಕುಳಿತು ನಸುನಗುತ್ತಾ ಟಿವಿ ನೋಡುತ್ತಿದ್ದರು. 
"ಹೊಲ ಮಾರಿ ಯಾವ ಕಾಲ ಆಯಿತು.  ನನಗೆ ಕೊಡುತ್ತೇನೆ ಎಂದಿದ್ದ ದುಡ್ಡು ಕೊಡಲಿಲ್ಲ.  ಯಾರು ಕೇಳಿದರೂ ಇವರು ಹಣ ಕೊಡುತ್ತಾರೆ.  ನಾನು ಕೇಳಿದರೆ ಇವರಿಗೆ ಹತ್ತು ಪೈಸೆ ಕೊಡಲೂ ಮನಸ್ಸು ಬರುವುದಿಲ್ಲ" ಎಂದು ಅಮ್ಮ ಹರಿ ಹಾಯ್ದರು. 
ಅಲ್ಲಿಯವರೆಗೂ ತಮಗೆ ಸಂಬಂಧವಿಲ್ಲವೇನೋ ಎಂಬಂತಿದ್ದ ಅಪ್ಪ ನಮ್ಮತ್ತ ತಿರುಗಿ ಹೇಳಿದರು, "ನಾನೇನೋ ಹತ್ತು ಪೈಸೆ ಕೊಡಲು ರೆಡಿ. ಆದರೆ ಅವಳು ತೆಗೆದುಕೊಳ್ಳುತ್ತಾಳಾ ಕೇಳು".  ಸಿಟ್ಟಿಗೆದ್ದಿದ್ದ ಅಮ್ಮನಿಗೂ ನಗೆ ತಡೆಯಲಾಗಲಿಲ್ಲ. 

Recently, mom was upset with my dad over money matters and was complaining with me.  Dad was watching TV while she spoke. 
"It's been so long since those lands were sold.  He had promised me that he would give me money from the proceeds.  He hasn't.  If anyone asks he never says no.  But he is not inclined to give me even 10 paise", she went on.
Dad, who appeared uninterested in our conversation, suddenly turned towards us and said, "I am inclined to give her 10 paise.  But is she willing to accept it?" Even my mom couldn't stop laughing despite her anger.

ತಂದೆಯ ಈ ರೀತಿಯ ನಗೆಹನಿಗಳು ನಮಗೆ ದಿನನಿತ್ಯವೂ ಕೇಳಸಿತುಗ್ಗವೆ.  ಆದರೆ ಅವಕ್ಕೆ ಜೋರಾಗೆ ನಕ್ಕರೆ ಮಾತ್ರ ಅವರಿಂದ ಮತ್ತೆ ಪಾಠ ಕೇಳಬೇಕಾಗುತ್ತೆ!

Dad keeps cracking such situational jokes day in and day out.  But if we laugh aloud, we have to be ready to listen to his lecture on how to behave!

(P.S. As I grow older I cannot appreciate enough of the presence of parents in my life.  I intend to make such small efforts to show their different facets. 
Also, this is my first attempt at writing in both Kannada and English.  Will hope to continue doing this often).

Labels: , ,

0 Comments:

Post a Comment

<< Home