Friday, November 01, 2024

Placating Papa

 



ಊಟದ ಗಮ್-ಮತ್ತು 

ಈ ಸಲ ನಮಗೆ ದೀಪಾವಳಿ ಹಬ್ಬದ ಆಚರಣೆಯಿಲ್ಲ. ಸಮೀಪದವರೊಬ್ಬರ ಸಾವಾದ ಕಾರಣಕ್ಕೆ.  ಹಬ್ಬ ಆಚರಿಸದಿದ್ದರೂ ಹಬ್ಬದಡಿಗೆಯ ರುಚಿ ಬಾಯಿಗೆ ಬೇಕಲ್ಲವೇ? ಅದಕ್ಕೇ ಅಪ್ಪ-ಅಮ್ಮನನ್ನು ಇನ್ನೂ ಕೆಲವು ನೆಂಟರಿಷ್ಟದವರೊಂದಿಗೆ ಊಟಕ್ಕೆ ಹೊರಗಡೆ ಕರೆದೊಯ್ಯುವುದೆಂದು ನಿರ್ಧಾರವಾಯಿತು. ಎಂದಿನಂತೆ ಅಪ್ಪ “ಯಾವಾಗಲೂ ಎಂ ಟಿ ಆರ್ ಹೋಟೆಲಿಗೆ ಕರ್ಕೊಂಡು ಹೋಗ್ತೀಯ. ಅಲ್ಲಿ ಏನು ಚೆನ್ನಾಗಿರುತ್ತೆ ಊಟ? ಬರೀ ಕೊತ್ತಂಬರಿ ಬೀಜದ ವಾಸನೆ ಆ ಸಾಂಬಾರಿನಲ್ಲಿ !“, ಅಂತ ರಾಗ ತೆಗೆದರು. 

Someone in the close family circle passed away a few days ago, and hence we weren’t supposed to celebrate the festival. Even if there’s no puja at home, there should be a feast for the tongue.  So, I chose to take parents and a few others out for a celebratory lunch.  Papa said, “You’ll take us to MTR as usual. The sambar smells so strongly of coriander seeds! I don’t like the food there”. He displayed how finicky his tastes are.  

ಅಪ್ಪ ಹಬ್ಬ-ಹರಿದಿನಗಳಂದು ಮಾಂಸದೂಟ ಬಡಿಸುವಲ್ಲಿ ನೀರು ಸಹ ಕುಡಿಯೋಲ್ಲ. ಸರಿ, ಅವರಿಗೆ ಎಲ್ಲಿ ಒಪ್ಪಬಹುದೋ ಎಂದು ಎಲ್ಲೆಲ್ಲಿ ಶುದ್ಧ ಸಸ್ಯಾಹಾರಿ ಊಟ ಸಿಗುತ್ತೋ ಆ ಜಾಗಗಳನ್ನೆಲ್ಲ ಗೂಗ್ಲ್ ನಲ್ಲಿ ಹುಡುಕಿದೆ. ಉತ್ತರ ಭಾರತದ ಊಟ ಬೇಡ ಅಂತಾಯಿತು. ಉತ್ತರ ಕರ್ನಾಟಕದ್ದೂ  ಬೇಡ ಅಂತಾಯಿತು. ಕೊನೆಗೆ ಹಳೆಯ ತಲೆಮಾರಿನ, ನೂರು ವರ್ಷಕ್ಕೂ ಹಳೆಯ ಹೋಟೆಲ್ ಆದ ವುಡ್ ಲ್ಯಾಂಡ್ ಹೋಟೆಲಿನ ಉಪಹಾರ ಗೃಹಕ್ಕೆ ಹೋಗುವುದೆಂದು ತೀರ್ಮಾನವಾಯಿತು. ಸಮಯಕ್ಕೆ ಸರಿಯಾಗಿ ಗಾಡಿ ಬಂತು; ಹತ್ತಿ ಹೊರಟೆವು. 

Papa doesn’t even drink water on festivals and auspicious days at restaurants that serve meat. So, I searched for an appropriate place that served exclusively vegetarian fare. First, North Indian food was eliminated (too oily and masala), and then North Karnataka food faced the axe (‘I don’t want to eat Jawar roti’). Finally, we all chose to visit an age-old establishment of Bengaluru, the Woodlands hotel. The vehicle we had booked arrived on time and we soon started off. 

ವುಡ್ ಲ್ಯಾಂಡ್ ಹೋಟೆಲ್ ಬಳಿ ಸುಳಿದು ದಶಕಗಳೇ ಕಳೆದಿದ್ದವು. ಅದರ ಹಿಂದಿನ ವೈಭವ ಇಂದಿಗೆ ಉಳಿದಿರಲಿಲ್ಲ. ಹಳೆಯ ನೆನಪುಗಳ ನಡುವೆ ಒಳ ಹೊಕ್ಕೆವು. ಊಟದ ವೇಳೆಯಲ್ಲಿ ಬೇರೇನೂ ದೊರೆಯುವ ಆಯ್ಕೆಗಳು ಇರಲಿಲ್ಲ. ಎಲ್ಲರಿಗೂ ಫುಲ್ ಮೀಲ್ಸ್ ಆರ್ಡರ್ ಮಾಡಿ ಕುಳಿತೆವು. 

It had been decades since any of us had visited the Woodlands. It didn’t look as regal or resplendent as in the good old days. We reminisced our visits as we entered the restaurant. Meal time, and the restaurant offered only meals. So, we all ordered the same.

ಶೀಘ್ರದಲ್ಲಿಯೇ ಬಾಳೆ ಎಲೆಯಲ್ಲಿ ಊಟ ಬಡಿಸುವ ಸೇವೆ ಮೊದಲಾಯಿತು.  ಬಹಳ ರೀತಿಯ ಭಕ್ಷ್ಯಗಳು ಎಲೆಯಲ್ಲಿ ಕಂಡವು - ಕ್ಯಾರಟ್ ಕೋಸಂಬರಿ, ಹಲವು ಬಗೆಯ ಕಾಯಿ ಪಲ್ಲೆಗಳು, ಕೂಟು, ಹಪ್ಪಳ, ಸಂಡಿಗೆ, ಪಾಯಸ, ಮಜ್ಜಿಗೆ ಹುಳಿ, ಇತ್ಯಾದಿ. ಬಳಿಕ ಪೂರಿ, ತರಕಾರಿ ಅನ್ನ, ಬಿಳಿ ಅನ್ನ, ಹುಳಿ, ಸಾರು ಸಹ ಬಂದವು. ನನ್ನ ಎಲೆ ಬರಿದಾಗುತ್ತ ಹೋದರೂ ಅಪ್ಪನ ಎಲೆ ಹಾಗೆಯೇ ತುಂಬಿಯೇ ಇತ್ತು.  ಎಂದಿನಂತೆ ಇಂದೂ ಸಹ ಹೊರಗಡೆ ಅವರಿಗೆ ಊಟ ರುಚಿಸಿರಲಿಲ್ಲ. ಏನೂ ಅವರಿಗೆ ಒಪ್ಪಿಗೆಯಾಗುವಂತೆ ಇರಲಿಲ್ಲ. 

Soon the food began to be served on a plantain leaf. There was salad, several types of vegetables, curries,  fryums, sweet, pooris, veg pulao, plain rice, sambar, rasam, and more. The hungry me emptied them all, but I noticed papa had barely nibbled on the food.  As always, he hadn’t liked the food.  None of the dishes would meet his fastidious tastebuds’ standards. 

ಅರ್ಧ ತುಂಬಿದ ಹೊಟ್ಟೆಯಲ್ಲಿಯೇ ಅಪ್ಪ ಅಲ್ಲಿಂದ ಹೊರಟರು (ಅವರ ಮಾತುಗಳಿವು).  “ಬೇರೆ ಎಲ್ಲಿಯಾದರೂ ಏನಾದ್ರೂ ತಿಂತೀಯಾ?”, ಎಂದು ಕೇಳಿದೆ. ಬೇಡವೆಂದರು. ಮನೆಗೆ ಹೊರಟೆವು. 

While we were overfull, papa was still not. “Would you like to eat something elsewhere?”, I asked.  He said no. We decided to return home. 

ದಾರಿಯಲ್ಲಿ ಮತ್ತೆಸುಮ್ಮನಿರಲಾಗದೆ ಕೇಳಿದೆ. ”ಯಾಕಪ್ಪ ಏನೂ ಸರಿಯಾಗಿ ತಿನ್ನಲಿಲ್ಲ?” 

“ತಿನ್ನುವ ಹಾಗಿದ್ದಿದ್ದರೆ ನಾನು ತಿನ್ನುತ್ತಾ ಇರಲಿಲ್ಲವಾ?“, ಎಂಬ ಮರುಪ್ರಶ್ನೆ ಬಂತು. 

“ಯಾಕಪ್ಪ?”

“ಸೆರ್ವಿಸ್ ತುಂಬಾ ಚೆನ್ನಾಗಿತ್ತು. ಸಹಾಯಕರೆಲ್ಲ ನಗು ನಗುತ್ತ ಬಡಿಸಿದರು. ಆದರೆ ಒಂದು ಪದಾರ್ಥವೂ ತಿನ್ನೋ ಹಾಗಿರಲಿಲ್ಲ.”

“ಬೇರೆ ಎಲ್ಲಿಯಾದರೂ ಹೋಗಬಹುದಿತ್ತೇನೋ?”, ಅಮ್ಮ ಎಂದರು.

While on the way home, I couldn’t stay quiet, and again asked, “Why didn’t you eat much, papa?”

“If it were edible, why wouldn’t I have eaten?”, he posed. 

“What was the matter?”

“The service was excellent, but I wish I could the same about the food. Not a dish was palatable”. 

“May be we should have gone somewhere else?”, remarked mom. 

“ಅಂಡಮಾನ್ ನಲ್ಲಿ ಎಷ್ಟು ಚೆನ್ನಾಗಿತ್ತು ಊಟ” ಅಂತ ವರ್ಷದ ಹಿಂದೆ ತಿಂದಿದ್ದನ್ನ ಮೆಲುಕು ಹಾಕಿದರು. ಹಾಗೇನೇ ೫೦ರ ದಶಕದ ವಿಷ್ಣು ಭವನ, ೬೦ರಲ್ಲಿ ಮದರಾಸಿನ ಊಟ, ೭೦ರ ಕೋಲಾರದ ದೊರೆ ಹೋಟೆಲ್ ದೋಸೆ, ಎಲ್ಲವುದರ ಪ್ರಸ್ತಾವನೆ ಆಯಿತು. 

“ಎಂ ಟಿ ಆರ್?” ಮತ್ತೆ ಅಮ್ಮ. 

“ಅದಾದರೂ ಎಷ್ಟೋ ವಾಸಿ. ಅನ್ನ ಸಾರಾದರೂ  ಚೆನ್ನಾಗಿರ್ತಿತ್ತು ತಿನ್ನೋ ಥರ”. 

“ನಾಳೆ ಅಲ್ಲಿಗೆ ಕರ್ಕೊಂಡು ಹೋಗ್ತೀನಿ. ಏನಂತೀಯಾ ಅಪ್ಪಾ?”

“ಆಯಿತು ಆಯಿತು”. 

ಅಮ್ಮ ನಾನು ಮುಸಿ ಮುಸಿ ನಕ್ಕೆವು. 

“The food in Andaman was so good”, papa ruminated what he had tasted a year ago. Along came memories from his visits to different restaurants and delicious fares over the ‘50s to the ‘80s. 

“And, MTR?”, asked mom. 

“That place is better. At least the sambar there is edible  I’d not have left the place hungry!”

“I will take you there then, tomorrow, papa. Okay?”

“Okay. Okay”. 

My mom and I laughed without making a sound lest it would annoy him.



5 Comments:

At 10:43 PM, Anonymous Anonymous said...

Your care of Papa is notable. Stay blessed.

 
At 11:56 PM, Anonymous Anonymous said...

🤪🤪

 
At 9:25 AM, Anonymous Anonymous said...

Yes Sir Best food available in Andaman is at P -3 Google search can't find it

 
At 12:14 PM, Anonymous bhupinayar@gmail.com said...

Pure and clear feelings with no sugar coating.. our parents generation speak what's in heart with as what they arewith not being artificial.. but at core they value the comfort and regard we render.. that's all the elderly folks look for.. the taste and temperament they have has commitment and they're like brand loyals.. blessed are you to have their company and enjoy special moments together

 
At 6:46 PM, Anonymous Anonymous said...

That's beautiful. I too just recalled woodland days. I had completely forgotten it should check out again. Dosa at Dorai tatas hotel is dads nostalgia heard a lot of it.

 

Post a Comment

<< Home