Islands
ದಿನವೂ ಬಲ್ಲವರನ್ನು ಕೇಳುತ್ತೇವೆ
ಹೇಗಿರುವೆ ಎಂದು
'ಪರವಾಗಿಲ್ಲ, ಚೆನ್ನಾಗಿದ್ದೇವೆ' ಎಂಬ
ಉತ್ತರ ಮಾತ್ರ ಎದುರು ನೋಡುತ್ತೆವೆ
'ನನ್ನ ಮನದ ಮಾತುಗಳೆಲ್ಲವ
ಹೇಳುವೆ, ಕೇಳುವೆಯ?' ಎಂದರೆ
ನಮ್ಮಲ್ಲಿ ಸಿಡಿಮಿಡಿ
'ಇನ್ನೊಮ್ಮೆ ಆಗಲಿ' ಎಂಬ ಜಾರುತ್ತರ
ಸೋಕರೂ ತಾಕದಂತ ಸ್ನೇಹ-ಸಂಬಂಧಗಳು
ವೇಳೆಯಿದ್ದರೂ ಇಲ್ಲದಂತ ಅವಸರ
ಬಿಟ್ಟು ಮುಂದೆ ಹೋಗುವ ಧಾವಂತ
'ನಡುವೆ ಅಂತರವಿರಲಿ' ಎಂಬ ಭಾವ
ಪ್ರತಿಯೊಬ್ಬರೂ ದ್ವೀಪವಾದರೆ
ನಮ್ಮನ್ನು ಒಂದು ಮಾಡುವ ಸೇತುವೆಗಳೆಲ್ಲಿ?
3 Comments:
WA WA super Anna 👌
Present generation ಮನದ ಭಾವ...
ಸೋಕರೂ ತಾಕದಂತ...... ನಡುವೆ ಅಂತರವಿರಲಿ......true and meaningful
Post a Comment
<< Home