Monday, February 10, 2014

Moonlight

ಸೇಂದಿ ಸವಿಯುವ ಬಾರಾ 
ದಾಸ್ವಾಳದೆಸಳಂಥ 
ಕಬ್ಬಿನ ರಸದಂಥ 
ಮತ್ತು ನೀಡುವ 
ಸುರ ಸಾರ 

ಗುಡ್ಡದ ಗುಡಿಯಾಗ 
ಹಾಡ್ಯಾಳ ಕೋಕಿಲ 
ರಾಗಾದ ಅಮಲಿಗೆ 
ತೂಗವ್ರೆ ಮಂದ್ಯೆಲ್ಲ 
ಹಾಕುತ್ತ ಹೆಜ್ಜೆ ತಾಳ 

ತುಂಬಿದ ತಿಂಗಳು 
ಕರೆದೈತೆ ಕೈ ಬೀಸಿ 
ತಣ್ಣನೆ ಗಾಳಿಯು 
ಸಣ್ಣಗೆ ನಡುಗಿಸಿ 
ಹೇಳೈತೆ ಕಿವಿಮಾತ 
ಸೇಂದಿ ಸವಿಯುವ ಬಾರಾ 

Labels: ,

0 Comments:

Post a Comment

<< Home