Sunday, May 09, 2021

Mother

ಮನದಲ್ಲಿರಲಿ ಏನೇ

ದುಗುಡ ದುಮ್ಮಾನ 

ಜಗವೆಲ್ಲ ಹರಡಿರಲಿ 

ಬರಿದೆ ಮೌನ 

ಅವಳ ನಗು ಸಾಕು 

ತರಲು ಸಾಂತ್ವನ 

ನೋಟವೊಂದೇ  ತುಂಬಿಹುದು 

ಮನಕ್ಕೆ ಚೇತನ 

ಹಸಿದಾಗ ಮುನಿದಾಗ 

ದಣಿದಾಗ ಕುಣಿದಾಗ 

ಬರುವ ಮೊದಲ ಪದ 

ಮೊದಲ ಬಾರಿ 

ಅತ್ತಾಗಲೂ ಅಚ್ಚರಿಗೂ 

ಬಿದ್ದರೂ ಎದ್ದರೂ 

ಎಲ್ಲಕ್ಕೂ ನಾಲಿಗೆಯಲ್ಲಿ 

‘ಅಮ್ಮಾ' ಅಮ್ಮ 



 


Labels: , , , , ,

0 Comments:

Post a Comment

<< Home