ಹೆಸರಿನಲ್ಲಿ ಏನಿದೆ? What is in a name?
ಇನ್ನೊಂದು ದಿನ ಕಳೆದರೆ ನನಗೆ ಐವತ್ತು ಮುಗಿದು ಐವತ್ತೊಂದರ ಪ್ರಾಯ ಆಗುತ್ತದೆ. ಏನೆಲ್ಲಾ ರೀತಿಯಲ್ಲಿ ನಾವು ನಮ್ಮ ವಯಸ್ಸನ್ನು ಹೇಳುತ್ತೇವೆ (ಅಥವಾ ಮುಚ್ಚಿಡುತ್ತೇವೆ) ಅಲ್ಲವೇ? ಮತ್ತು ವಯಸ್ಸನ್ನು ಹೇಳಲು ಹಲವು ರೀತಿಯ ವರ್ಣನೆಯನ್ನು ಸಹ ಬಳಸುತ್ತೇವೆ.
Another day, and I will turn 51. It is common to express (or hide) our age in many different ways of expression. Similarly, we use many metaphors to express age, especially of a person.
ದಿನಪತ್ರಿಕೆಗಳಲ್ಲಿ ಅಥವಾ ಕಥೆಗಳಲ್ಲಿ ಓದಿರಬಹುದು, "ಅವರು ಅರವತ್ತು ವಸಂತಗಳನ್ನು ಕಂಡಿರುವರು'. ವಸಂತ ಕಾಲವನ್ನೇ ಕಾಣದ ದಕ್ಷಿಣ ಭಾರತದಲ್ಲಿ ಇವರು ವಸಂತ ಋತುವನ್ನು ಹೇಗೆ ಕಂಡರೂ ಎಂದು ನೀವು ನಾನು ಪ್ರಶ್ನಿಸುವಂತಿಲ್ಲ! ವಸಂತ ಎಂದಾಗ ನೆನಪು ಬಂತು. ಎಲ್ಲರಿಗೂ ಸುಂದರವಾದ ಹೆಸರುಗಳನ್ನೂ ತಮ್ಮ ಮಕ್ಕಳಿಗೆ ಮನೆಯವರಿಗೆ ಇಡುವ ಅಸೆ ಸಹಜ. ಒಂದು ಕಾಲದಲ್ಲಿ ವಸಂತ ಎನ್ನುವ ಹೆಸರು ಬಹಳ ಜನಪ್ರಿಯ. ಹುಡುಗ ಹುಡುಗಿಯರೆನ್ನದೆ ಎಲ್ಲರಿಗೂ ಈ ನಾಮವನ್ನು ಕರುಣಿಸಿದ್ದಾರೆ. ಹೇಮಂತ, ಶಿಶಿರ ಹಾಗೂ ಶರದ್ ಋತುಗಳನ್ನು ಹೆಚ್ಚಾಗಿ ಹುಡುಗರಿಗೆ ಬಳಸಿದರೆ ವರ್ಷ ಕಾಲವನ್ನು ಹೆಣ್ಣು ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಈ ಹೇಮಂತ, ಶಿಶಿರ ಹಾಗೂ ಶರದ್ ಋತುಗಳನ್ನೂ ನಾವು ದಕ್ಷಿಣದಲ್ಲಿ ಕಾಣೆವು. ಹೆಚ್ಚು ಮಂದಿಗೆ ಈ ಕಾಲಗಳ ನಡುವಿನ ವ್ಯತ್ಯಾಸವೂ ತಿಳಿದಿರುವುದಿಲ್ಲ.
You might have read in stories and articles, "He has seen sixty spring seasons in his life". For a south Indian who barely sees two and a half seasons, spring isn't known, but we do not question this expression. The word, 'spring' (Vasanta in most Indian tongues) reminds me of the desire of parents to give their young ones, beautiful and trendy names. There was a time when Vasanta was a popular name for both boy and girl child. Similarly, the names of other seasons too have been popular as names - Hemant, Sharad, and Shishir among boys, and Varsha among girls. Even if many who name their wards do not know what these names mean!
ನನ್ನ ಗೆಳೆಯನೊಬ್ಬನ ಹೆಂಡತಿಯ ಹೆಸರು ಗ್ರೀಷ್ಮ. ಗ್ರೀಷ್ಮ ಎಂದರೆ ಸುಡು ಬೇಸಿಗೆ ಎಂದರ್ಥ. ಅವರ ತಂದೆ-ತಾಯಿಗಳು ಗೊತ್ತಿದ್ದೂ ಈ ಹೆಸರಿಟ್ಟರೆ ಅಥವಾ ಈ ಹುಡುಗಿಯ ಸ್ವಭಾವವೇ ಮಗುವಿದ್ದಾಗಲಿಂದ ಈ ರೀತಿಯಿತ್ತೇ ಎಂದು ನನಗೆ ಆಗಾಗ ಅನುಮಾನ ಕಾಡುತ್ತದೆ. ಆದರೆ ಸುಂದರ, ವಿಭಿನ್ನ ಹೆಸರಿಡುವ ಬಯಕೆ ಇವೆಲ್ಲವನ್ನೂ ಮೀರಿದ್ದು. ಹೇಮಂತ ಮತ್ತು ವರ್ಷರನ್ನು ಕನ್ನಡದ ಅವತರಣಿಕೆಯಲ್ಲಿ ಕರೆದರೆ ಹೇಗಿರಬಹುದು?
One of my friend's wife is named 'Grishma'. It means, "hot summer", I do not know if her parents named her so without knowing, or based on her temperament as a child. But, the desire to find a beautiful, different, name for children is beyond all this. Just imagine calling Hemant and Varsha in local tongues, say Kannada!
ವಸಂತ-ಹೇಮಂತಗಳಂತೆ ಹನ್ನೆರಡು ಮಾಸಗಳ ಹೆಸರಾಗಲು ಅಷ್ಟು ವಾಡಿಕೆಯಲ್ಲಿಲ್ಲ ಹೆಸರುಗಳಂತೆ. ಆಗಾಗ ಶ್ರಾವಣ, ಚೈತ್ರ, ಫಾಲ್ಗುಣದ ಹೆಸರುಗಳನ್ನೂ ಕೇಳಿರುವೆನಾದರೂ ಆಷಾಡ, ಜ್ಯೇಷ್ಠ, ಭಾದ್ರಪದಗಳನ್ನು ಹೆಸರಾಗಿ ಇಟ್ಟಿರುವುದು ಕಂಡಿಲ್ಲ. ಕಾರ್ತೀಕ ತುಂಬಾ ರೂಡಿಯಲ್ಲಿದ್ದರೂ, ಅದು ಷಣ್ಮುಗನ ಇನ್ನೊಂದು ಹೆಸರೆಂಬಂತೆ ಜನ ಬಳಸುತ್ತಾರೆ. ಇಷ್ಟಾದರೂ ಜನ ಇನ್ನೂ ವಿದೇಶೀಯರಂತೆ ಜನವರಿ, ಏಪ್ರಿಲ್ ಎಂಬ ಹೆಸರುಗಳನ್ನೂ ಇಡುತ್ತಿಲ್ಲ.
Even though the names of seasons are largely popular, the names of months in Indian calendar haven't been so. May be with the exception of Shravan and Chaitra, and rarely, Phalgun. Though Kartik is a popular name, but most times it is used as a derivative of Lord Shanmuga. Yet, our people haven't yet started naming their children by the English months.
ಹಳೆಯ ದಿನಗಳಲ್ಲಿ ಹೆಚ್ಚಾಗಿ ಮಂದಿ ದೇವಾ-ದೇವಿಯರ ಹೆಸರಿಗಳನ್ನು ಆರಿಸುತ್ತಿದ್ದರು. ಕರ್ನಾಟಕದಲ್ಲಿ ಮಂಜುನಾಥನಿಲ್ಲದ ಮನೆಯಿಲ್ಲ ಎಂಬ ಕಾಲವಿತ್ತು. ಅಕಸ್ಮಾತ್ ಮಕ್ಕಳು ತುಂಬಾ ನಿಧಾನವಾಗಿ ಹುಟ್ಟಿದಾಗಲೋ ಅಥವಾ ಹಲವಾರು ಕಾಯಿಲೆಗಳಿಂದ ಪರಗಾಗಿದ್ದಾಗಲೋ ದೃಷ್ಟಿ ನಿವಾರಿಸುವಂತಹ ಹೆಸರನ್ನಿಡುತ್ತಿದ್ದರು - ಕಸಮ್ಮ, ತಿಪ್ಪೇಸ್ವಾಮಿ, ಎಂದು. ಪಾಪ ಆ ಮಕ್ಕಳು ಎಷ್ಟು ಬಾಧೆ ಪಟ್ಟರೋ ಗೊತ್ತಿಲ್ಲ.
Back in the old times, most would be named after gods and goddesses. There was a time when every household had a boy named Manjunatha in Karnataka. In case children were born late or had overcome severe health issues, they would be given terrible names to ward of the evil eye. Those children surely might have grown up with quite a complex coming to terms with their names like 'Trash'.
ತಮಿಳು ನಾಡು ಹೊರತುಪಡಿಸಿ ಮಿಕ್ಕೆಲ್ಲ ಕಡೆ ಸಂಸ್ಕೃತದ ಪ್ರಭಾವ ತುಂಬಾ ಹೆಚ್ಚಾಗಿದೆ. ಮನೇಕಾ ಗಾಂಧಿ ಬರೆದ ಪುಸ್ತಕದ ನಂತರವಂತೂ ಮಕ್ಕಳ ಹೆಸರಿಗಾಗಿ ಜನ ಹುಡುಕದ ಜಾಗವಿಲ್ಲ. ಆದರೆ ಸಂಸ್ಕೃತದಲ್ಲಿ ಚೆನ್ನಾಗಿದೆ ಎಂದು ಇಡುವ ಹೆಸರುಗಳ ಅರ್ಥ ನಮ್ಮದೇ ಭಾಷೆಗಳಲ್ಲಿ ಹೇಳಿದಾಗ ನಗೆಪಾಟಲಾಗಬಹುದು. ರಿಷಬ್ (ವೃಷಭದ ಅಪಭ್ರಂಶ) ಎಂದರೆ ಹೋರಿ ಎಂದರ್ಥ. ಇದು ಹನ್ನೆರಡು ರಾಶಿಗಳಲ್ಲೊಂದು ಸಹ. ಯಾವ ಗಂಡೆದೆಯ ಶೂರನೂ ಈ ಹೆಸರನ್ನು ಚೆನ್ನಾಗಿದೆ ಎಂದು ತನ್ನದಾಗಿಸಿಕೊಳ್ಳನು.
Barring Tamil Nadu, there has been a growing influence of Sanskrit across the country. After the publishing of a book of Indian names by Maneka Gandhi, there is not a place that parents have looked in to find a novel name for their newborn. But, when translated from Sanskrit, those lovely sounding names might make one guffaw too. Take for example, Rishabh (Vrishabh originally, in Sanskrit; indicates the second sign of the Zodiac). It means 'bull'. No matter how muscular or masculine the man is, he may not want to be named or called as Bull.
ಒಳ್ಳೆಯ ಹೆಸರಿನ ಹುಡುಕಾಟದಲ್ಲಿ ಆಗುವ ಅಭಾಸಗಳೂ ಕಡಿಮೆಯೇನಿಲ್ಲ. ಎರಡು ಹೆಣ್ಣು ಮಕ್ಕಳ ತಂದೆಯೊಬ್ಬ ಪ್ರಾಸದ ಹಂಬಲದಲ್ಲಿ 'ಕರಿಷ್ಮಾ ಚರಿಷ್ಮಾ' ಎಂದು ನಾಮಕರಣಿಸಿದ ಘಟನೆ ನನ್ನ ಕಣ್ಣ ಮುಂದಿದೆ. ಹಾಗೆಯೇ, ನನ್ನ ಸಹಪಾಠಿಯನ್ನು 'ದೇವಕಿ' ಎಂದು ಅವರ ಮಾತಾ-ಪಿತರು ತನ್ನ ಅಣ್ಣನ 'ವಾಸುಕಿ'ಯೊಂದಿಗೆ ಹೋಲುತ್ತದೆ ಎಂದು ಇಟ್ಟಿದ್ದರು.
The snafus that happen in the search for unique names are no less. A father in my neighbourhood named his two daughters, 'Karishma', and 'Charisma', because they rhyme, knowing little that they are pronounced the same way in English. Similarly, a classmate was named 'Devaki', by his parents to rhyme with his brother's 'Vasuki' without bothering to realise it was a girl's name.
ಸಿನಿಮಾ ಪ್ರಿಯೆಯಾದ ನನ್ನ ನೆಂಟರೊಬ್ಬರು ತಮ್ಮ ಮಕ್ಕಳಿಗೆ 'ಶರ್ಮಿಳಾ ಟಾಗೋರ್' ಹಾಗೂ 'ರಾಜೇಶ್ ಖನ್ನಾ' ಎಂದು ಪೂರ್ಣ ಹೆಸರಿಟ್ಟಿದ್ದರು ಮೈಸೂರಿನಲ್ಲಿ. ಅವರಿಗೆ ಟಾಗೋರ್ ಮತ್ತು ಖನ್ನಾ ಎಂಬುದು ಬೇರೆ ಬೇರೆ ತಂದೆಯರನ್ನು ಸೂಚಿಸುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಈ ಘಟನೆಯನ್ನು ಗೆಳೆಯನೊಬ್ಬನಿಗೆ ಹೇಳಿದಾಗ ಆತ ತಾನು ಆಂಧ್ರದ ಉದಾಹರಣೆ ಕೊಟ್ಟ. ಅಲ್ಲಿ ಗಾಂಧಿ ಮತ್ತು ನೆಹರು ಅಣ್ಣ-ತಮ್ಮಂದಿರು. ನನ್ನದೇ ಹಿರಿಯ ಸಹೋದ್ಯೋಗಿಯೊಬ್ಬರ ಹೆಸರು ಅಬ್ರಹಾಂ ಲಿಂಕನ್ ಎಂದಿತ್ತು - ಅವರೂ ಸಹ ಆಂಧ್ರದವರೇ! ಹಾಗೆಯೆ ಝಾನ್ಸಿ ಎಂಬ ಊರು ಮಹಿಳೆಯರ ಹೆಸರಾಗಿಬಿಟ್ಟಿದೆ.
A cinema-buff relative of mine in Mysore had named her children, 'Sharmila Tagore' and 'Rajesh Khanna'. She was oblivious to the fact that Tagore and Khanna would indicate different parentage. When I was narrating this incident to a friend of mine, he told me of the examples from Andhra, where Gandhi and Nehru would be first names of two brothers; also, Jhansi, a place in MP, is commonly used as a name for girls. It also reminded me of the case of my own senior colleague who was named Abraham Lincoln. Not surprisingly he too was from Andhra.
ಒಂದು ಸಮಯದಲ್ಲಿ ಅಮರ ಸಿಂಹನ ಅಮರಕೋಶ ಬಹಳ ಪ್ರತೀತಿಯಲ್ಲಿತ್ತು. ಆದರೆ ಈಗ ಜನ ಪರ್ಷಿಯನ್, ಮೆಕ್ಸಿಕನ್ ಹೆಸರುಗಳನ್ನೂ ನೋಡುತ್ತಿದ್ದಾರೆ. ಹೆಸರಿನಲ್ಲಿ ಏನಿದೆ ಎಂದು ನಾನು ನೀವು ಕೇಳಬಹುದ್. ಆದರೆ ಅಲ್ಲಿಯೇ ಎಲ್ಲ ಸ್ವಾರಸ್ಯ ಅಡಗಿದೆ.
There was a time when many would depend on Amara Simha's 'Amara Kosha' to find names for newborns. Today parents are raiding Persian and Mexican legends for novelty. You and I may ask what's in a name. But, there is a story behind every name!
4 Comments:
Interesting!
A rose is a rose is a rose isn’t it
Shakespeare said What is there in the name? And then he signs under it. So then people recognized this statement cos of his signature. So this summarize what is there in the name.
Good one sir.
Maybe your list may go unending and an interesting one too
Before naming my son I read the book "what shall we name the child" didn't select one from it though but named him Johanan Prem Kumar though a long one we meant that "Jehovah is gracious" (Johanan) that he gave us a "loving son" (Prem Kumar). So far I have seen lots of God's grace in his life and he truly is loving
Most of us are atleast from my age are researching for meanings before they name their child.
What's in a name. Rose by any other would smell as sweet
Post a Comment
<< Home