Friday, January 20, 2023

ಕದನ

ಪದರ ತೆರೆದರೂ 
ಗೋಜಲು ಹೋಗದು 
ಪರದೆ ಸರಿಸಿದರೂ 
ಬೆಳಕೇ ಬಾರದು 
ಸಿಲುಕಿರುವೆ ನಾನು 
ಬಿಡಿಸಲಾರದ ಸಿಕ್ಕೊಳು 

ಮುಂದೊಂದು ಹಿಂದೊಂದು 
ಇನ್ನೆಲ್ಲೋ ಮತ್ತೊಂದು ಮಗದೊಂದು 
ಈ ಪರಿಯ ಮುಖವಾಡಗಳ 
ಇನ್ನೆಷ್ಟು ಕಾಣುವೆನೋ 
ಎಷ್ಟು ಕಳಚಿದರೂ 
ನಿಜರೂಪ ಕಾಣದು 

ಬೇತಾಳಗಳೇ ಇಲ್ಲೆಲ್ಲ 
ತ್ರಿವಿಕ್ರಮ ನಾನಲ್ಲ