Friday, July 26, 2024

Mounting Up the Saddle II

(.....Continued)

(ಮುಂದುವರಿದ ಭಾಗ..)

Part II: Firmly in the Saddle, Not!

ಭಾಗ ೨: ಕುದುರೆಯ ಬೆನ್ನೇರಿ



A closer look at the peak

The first thing I did after getting out of the bed was to step out and look at the sky, to see if there were any rain bearing dark clouds, expectantly (there was that faint hope which would let me get back into the bed).  None.  No sooner than that, my colleague Dilip called. To ensure I was up and would get ready in time.  My grumpiness only intensified.  I reluctantly began to get ready.  We were asked to carry our own water bottles; I added a few packs of oral rehydration salts, some biscuits and toffees, and a bunch of oranges for good measure.  I also packed my insect repellant spray.  I am allergic to leech and sand fly bites.  And, if it rains, there would be leeches, and the beaches of Andamans are well-known for sand flies, and I have suffered terribly for not knowing beforehand.  And, the bites festered for months.  

ನಾಲ್ಕು ಗಂಟೆಗೆ ಎದ್ದು ಮೊದಲು ನಾನು ಆಕಾಶ ನೋಡಿದೆ, ಮಳೆ ಬರುವ ಲಕ್ಷಣಗಳೇನಾದರೂ ಇವೆಯಾ ತಿಳಿಯಲು. ಮನದ ಯಾವುದೊ ಮೂಲೆಯಲ್ಲಿ ಒಂದು ಆಸೆಯಿತ್ತು ಅವು ಕಾಣಲೆಂದು ಆದರೆ ಯಾವ ಮೋಡವೂ ಇರಲಿಲ್ಲ.  ಹಿಂದೆಯೇ ದಿಲೀಪರಿಂದ  ಫೋನ್ ಬಂತು, ತಯಾರಾಗಲು.  ಮುಖ ಊದಿಸಿಕೊಂಡೆ ರೆಡಿ ಆಗಲಾರಂಭಿಸಿದೆ.  ಮೊದಲೇ ಅಣತಿಯಾದಂತೆ ನೀರಿನ ಬಾಟಲಿ ಬ್ಯಾಗ್ನಲ್ಲಿ ಇಟ್ಟುಕೊಂಡೆ; ಜೊತೆಗೆ ಇರಲಿ ಎಂದು ಓ.ಆರ್.ಎಸ್, ಬಿಸ್ಕತ್, ಟಾಫಿ ಮತ್ತು ಕಿತ್ತಳೆ ಹಣ್ಣುಗಳನ್ನೂ ತುಂಬಿಕೊಂಡೆ. ಜಿಗಣೆ ಕಚ್ಚಿದರೆ ಅಲರ್ಜಿ ಆಗುವ ಕಾರಣದಿಂದಾಗಿ ಕೀಟನಾಶಕವೊಂದನ್ನೂ ಎತ್ತಿಕೊಂಡೆ. ಅಂಡಮಾನ್ ದ್ವೀಪಗಳಲ್ಲಿ ಮರಳು ನೊಣಗಳು ಹೆಚ್ಚು ಕಾಣುತ್ತವೆ, ಮತ್ತು ಅವುಗಳ ಕಡಿತ ನನಗೆ ಆತಂಕಕಾರಿ.  ಕಚ್ಚಿದಲ್ಲಿ ನನಗೆ ಅತಿಯಾಗಿ ಕೆರೆತ ಮೊದಲಾಗುತ್ತೆ ಮತ್ತು ಗಾಯಗಳು ತಿಂಗಳಾನುಗಟ್ಟಲೆ ಉಳ್ಕೊಳುತ್ತೆ. 

Just as I was fully ready, Dilip knocked on the door to inform that the vehicle (and the officer) had arrived.  Our food pack was ready too.  I was in two minds if I should carry the camera I had borrowed.  I wanted to click pictures everywhere, but while climbing it would become a burden.  Reluctantly, I left it behind. As it turned out, it proved to be a good decision. 

ತಯಾರಾಗುವದು ಮುಗಿಯುತ್ತಿದ್ದಂತೆಯೇ ದಿಲೀಪ್ ಕೊನೆಯ ಬಾಗಿಲು ಬಡಿದು ನಮ್ಮ ಕಾರ್ (ಜೊತೆಗೆ ನಮ್ಮೊಂದಿಗೆ ಬರುವ ಅಧಿಕಾರಿ) ಬಂದಿರುವುದಾಗಿ ತಿಳಿಸಿದರು.  ನಮ್ಮ ಊಟದ ಬುತ್ತಿಯೂ ಕಟ್ಟಿಯಾಗಿತ್ತು.  ಕ್ಯಾಮೆರಾ ಜೊತೆಗೆ ತೆಗೆದುಕೊಂಡು ಹೋಗೋದೋ ಬೇಡವೋ ಎಂಬ ಗೊಂದಲವೂ ಇತ್ತು.  ಹೋದಲ್ಲೆಲ್ಲ ಚಿತ್ರ ತೆಗೆಯುವ ಗೀಳಿನಿಂದಲೇ ಕ್ಯಾಮೆರಾ ಎರವಲು ತಂದಿದ್ದೆ.  ಕೊನೆಗೆ, ಹತ್ತುವಾಗ ಭಾರ ಏಕೆಂದು ಹಿಂದೆ ಬಿಟ್ಟೆ. ನಂತರ ನಾನು ಹಾಗೆ ಬಿಟ್ಟು ಬಂದದ್ದು ಒಳ್ಳೆಯದೇ ಆಯಿತು ಅಂತ ಅರ್ಥ ಆಯಿತು.  

My original attire for the trek

I stepped out and saw the officer who was to come with us, Saksham, was all set in his shorts and t-shirt.  Here I was all set in my trousers and full length tee, based on his advice.  Instead of showing my annoyance needlessly, I quietly went back and changed into shorts and singlet/vest and returned.  It was the best decision I had made for the day - apart from carrying ORS. We soon set off for the trek.  

ಹೊರ ಬಂದು ನೋಡಿದರೆ, ನಮ್ಮೊಂದಿಗೆ ಬರಲಿದ್ದ ಅಧಿಕಾರಿ ಸಕ್ಷಮ್ ಶಾರ್ಟ್ಸ್ ಮತ್ತು ಟಿ-ಶರ್ಟ್ ಧರಿಸಿ ಬಂದಿದ್ದ.  ನಾನು ಸಿಡಿಮಿಡಿಗೊಂಡರೂ ತೋರ್ಗೊಡದೆ ಸುಮ್ಮನೆ ಒಳಬಂದು ಬಟ್ಟೆ ಬದಲಿಸಿದೆ.  ತೋಳಿಲ್ಲದ ಟಿ-ಶರ್ಟ್ ಮತ್ತು ಶಾರ್ಟ್ಸ್ ತೊಟ್ಟು ಬಂಡಿ  ಹತ್ತಿದೆ.  ಬೆಟ್ಟ ಹತ್ತುವಾಗ ತೊಟ್ಟ ಬಟ್ಟೆ  ಹಗುರವಾಗಿರಬೇಕು. ಹೀಗೆ ಬದಲಿಸಿದ್ದು ನನಗೆ ಒಳ್ಳೆಯದೇ ಮಾಡಿತು. 

The roads were empty. It took us about 20 minutes to reach the Lamia Bay forest Check Post.  We entered our details here with the forest authorities, and began our trek journey.  The path takes us through a forest route (it is called the Saddle Peak National Park) that first runs along the coast.  Lamiya Bay is the name of the inlet of the ocean here.  It is a pretty place, although not amenable to sea bathing, thanks to it being rocky and full of corals.  The beach, I noted, was made up of greyish-black sand.  The sand beneath the woods to was similar in nature.  It made me remark to others that this place possibly was a volcano once, and might have gone extinct.  There was no proof for me to say, beyond the dark, ashy sands, which appeared to be volcanic in origin.  My theory was bolstered by the presence of the volcanoes in Narkondam (dormant), and Barren Island (active).  

ಹೊರಟಾಗ ರಸ್ತೆಗಳೆಲ್ಲ ಬಣಬಣಗಾಡುತ್ತಿದ್ದವು.  ೨೦ ನಿಮಿಷಗಳಲ್ಲಿ ಲಾಮಿಯಾ ಬೇ ಅರಣ್ಯ  ಇಲಾಖೆಯ ಚೆಕ್ ಪಾಯಿಂಟ್ ತಲುಪಿದ್ದೆವು.  ನಮ್ಮ ಚಾರಣದ ಬಗೆಗಿನ ವಿವರಗಳನ್ನು ನೋಂದಿಸಿ ನಮ್ಮ ಪ್ರಯಾಣ ಮೊದಲು ಮಾಡಿದೆವು.  ಸ್ಯಾಡ್ಲ್ ಪೀಕ್ ರಾಷ್ಟೀಯ ವನದ ಕಾಡಿನ ಹಾದಿಯಲ್ಲಿ ನಮ್ಮ ಚಾರಣ ಆರಂಭವಾಗಿತ್ತು. ಮೊದಲಿಗೆ ನಾವು ಕಡಲ ತೀರದ ಮೂಲಕ ನಡೆಯಬೇಕಿತ್ತು. ಕಡಲಿನ ಈ ಸುಂದರವಾದ ಭಾಗಕ್ಕೆ ಲಾಮಿಯಾ ಬೇ ಎಂದು ಹೆಸರು. ನೋಟ ಚೆನ್ನಾಗಿದ್ದರೂ ಈ ನೀರಲ್ಲಿ ಸ್ನಾನ ಮಾಡುವಂತಿರಲಿಲ್ಲ.  ಕಲ್ಲು-ಹವಳಗಳು ಹೆಚ್ಚಿನ ಭಾಗದಲ್ಲಿ ಕಂಡು ಬರುತ್ತಿದ್ದವು.  ಇಲ್ಲಿನ ಮರಳು ಕಪ್ಪು ಮಿಶ್ರಿತ ಬೂದು ಬಣ್ಣದ್ದಾಗಿತ್ತು.  ಅದನ್ನು ನೋಡಿ ನಾನು ಮೊದಲು ಈ ಜಾಗ ಅಗ್ನಿ ಪರ್ವತವಾಗಿತ್ತೆಂದು ತೀರ್ಮಾನಿಸಿದೆ. ಇದಕ್ಕೆ ಪೂರಕವಾದಂತೆ ನಾರ್ಕೊಂಡಂ (ಸುಪ್ತ) ಮತ್ತು ಬಾರ್ರೆನ್ (ಸಕ್ರಿಯ)  ದ್ವೀಪಗಳೂ ಹತ್ತಿರದಲ್ಲೇ ಇದ್ದವು. 

Our Conveyance
ನಮ್ಮ ರಥ 

Entry Board to the Trek
ಪ್ರವೇಶ ಫಲಕ 



We began our hiking at around 6 from Lamiya Bay.  Soon, we left the seashore and headed into the woods.  We found some interesting flowering plants along the way, and even some rocks that had washed way inside with corals embedded into them.  The wooded path largely is on flat ground, and after walking for about 4 odd kilometres, we came to a small stream.  Elevation and climb began after we crossed the stream.  Until then, what felt like an easy walk, suddenly began to make my back slowly sing.  One, it had been a long time since I had attempted any serious climbing - it was before I had contracted covid, not once but three times in a period of slightly over a year.  I had done the trek of Bannanje falls in the monsoons.  It was both exhilerating and challenging, and had taken an entire day.  

ಸುಮಾರು ೬ ನಾವು ನಡೆಯಲು ಮೊದಲಿಟ್ಟೆವು.  ಬಹು ಬೇಗ ಕಡಲ ತೀರ ಬಿಟ್ಟು ಕಾಡಿನ ದಾರಿ ಕೂಡ ಹಿಡಿದೆವು.  ಹಾದಿಯಲ್ಲಿ ಅನೇಕ ಬಗೆಯ ಹೂ ಗಿಡಗಳು ಮತ್ತು ಆಕರ್ಷಕ ಕಲ್ಲುಗಳು ಕಂಡೆವು.  ಸಾಕಷ್ಟು ಬಗೆಯ ಹವಳಗಳು ಸಹ ಕಂಡವು - ಬಹುಷಃ ಕಡಲು ಉಕ್ಕಿದಾಗ ಅವು ಇಲ್ಲಿಯವರೆಗೂ ಬಂದಿವೆಯೆನಿಸಿತ್ತು.  ಸರಿಸುಮಾರು ೪ ಕಿಮೀ ನಂತರ ಒಂದು ಚಿಕ್ಕ ಹೋಲ್ ದಾಟಿದೆವು.  ಇದಾದ ಮೇಲೆ ಎತ್ತರದ ಪ್ರದೇಶ ಮೊದಲಾಯಿತು.  ಇಲ್ಲಿಯವರೆಗೆ ಸುಗಮವಾಗಿಯೇ ನಡೆದಿದ್ದೆವು.  ಇದರ ನಂತರ ಕಷ್ಟ ಮೊದಲಾಯಿತು.  ತುಂಬಾ ದಿನಗಳ ನಂತರ ಯಾವುದೇ ಚಾರಣ ಮಾಡುತ್ತಿದ್ದೆ. ಕೋವಿಡ್ ಕಾಲದ ಮೊದಲು ಬನ್ನಂಜೆ ಜಲಪಾತ ನೋಡಲು ಬೆಟ್ಟ ಹತ್ತಿದ್ದೆ.  ಜಲಪಾತ ಧುಮ್ಮಿಕ್ಕುವುದು ನೋಡುವುದೇ ರೋಮಾಂಚಕ.  ಆದರೆ, ೨೦೨೦-೨೨ರ ಮಧ್ಯೆ ನನಗೆ ಮೂರು ಬಾರಿ ಕೋವಿಡ್ ಸೋಂಕಾಗಿತ್ತು.  ಆಮೇಲೆ ನನ್ನ ದೇಹಶಕ್ತಿ ಸಾಕಷ್ಟು ಕುಂದಿತ್ತು.  ಎಲ್ಲೋ ಚಾರಣವಾಗಲಿ ಬಹು ದೂರ ಓಡುವುದಾಗಲಿ ನಿಲ್ಲಿಸಿದ್ದೆ.  

Selfie before we start trekking
ಚಾರಣಕ್ಕೆ ಮುಂಚೆ ಒಂದು ಸ್ವ-ಚಿತ್ರ 


You cross this stream to reach Lamia Bay
ಲಾಮಿಯಾ ಬೇ ತಲುಪಲು ಕ್ರಮಿಸಬೇಕಾದ ಹೊಳೆ 

The hike became quite steep in no time, and we all were slowly panting for breath.  The only exception was Saksham.  He led the pack, and kept a good pace of hiking.  I followed him.  Behind me was Dilip, and the attendant with the lunch pack.  Suresh, our driver brought up the rear, keeping an eye for any who fell behind.  Saksham, the attendant, and the driver were all in their 20s, while Dilip and I were in our 50s.  So, it was easier for the young guys to maintain a good pace, while we struggled to match their stride.  Also, weather wasn't of helping.  It was hot and humid, with barely a breeze.  Every few metres, we would stop and catch our breath, while Saksham waited ahead patiently.  The backpack made the climb even more rigorous.  If a couple of kgs on the back could make such a huge difference, I wondered what the plight of the guys who work as baggage carriers.  Privilege makes us not think about them ever, but only when we put ourselves in their shoes do we realise how difficult their lives are, and how little they earn.

ಮೇಲೆ ಏರುವುದು ನಮಗೆ ಇನ್ನೂ ಕಷ್ಟ ಆಗುತ್ತಲೇ ಹೋಯಿತು.  ಏದುಸಿರು ಬಿಡುತ್ತಾ ಹತ್ತುತ್ತ ಇದ್ದೆವು, ಸಕ್ಷಮನ ಹೊರತು.  ಸಕ್ಷಮ್ ಎಲ್ಲರಿಗೂ  ಮುಂದಿದ್ದ. ಎಲ್ಲರಿಗಿಂತ ಹಿಂದೆ ಸುರೇಶ ನಡೆದಿದ್ದ.  ಸಕ್ಷಮ್, ಸುರೇಶ, ಮತ್ತು ನಮ್ಮ ಸಹಾಯಕ ಎಲ್ಲರೂ ೨೦ರ ಹರೆಯದಲ್ಲಿದ್ದರೆ ನಾನು ಮತ್ತು ದಿಲೀಪ್ ೫೦ ದಾಟಿದ್ದೆವು.  ಅವರ ಸಮಕ್ಕೆ ನಮಗೆ ನಡೆಯೋಕೆ ಸಧ್ಯ ಇರ್ಲಿಲ್ಲ.  ಅದರ ಜೊತೆಗೆ ಬಿಸಿಲು ಜೋರಿತ್ತು, ಅದರೊಂದಿಗೆ ಕಡಲ ಆವಿ ಸಹ ಸೇರಿ ಚೆನ್ನಾಗಿ ನಮಗೆ ಬೆವರಿಳಿಸಿತ್ತು.  ಸಾಲದ್ದಕ್ಕೆ ಗಾಳಿ ಸಹ ಕಡಿಮೆ ಬೀಸ್ತಾ ಇತ್ತು.  ಸ್ವಲ್ಪ ಸ್ವಲ್ಪ ಹೆಜ್ಜೆಗೂ ದಣಿವಾರಿಸ್ಕೊತಾ ಇದ್ದೆವು, ನಾನು ದಿಲೀಪ್.  ಸಕ್ಷಮ್ ನಮಗಾಗಿ ಆಗಾಗ ಕಾಯಬೇಕಾಗ್ತಾ ಇತ್ತು.  ಒಂದೆರಡು ಕೆ.ಜಿ. ಭಾರ ಹೊತ್ತೇ ನಾವು ಈ ಪಾಡು ಪಡ್ತಾ ಇದೀವಿ, ಇನ್ನು ಭಾರ ಹೊತ್ತೆ  ಬದುಕು ಕಟ್ಟಿಕೊಂಡೋರು ಎಷ್ಟು ಕಷ್ಟ ಪಡಬೇಡ! ಪ್ರತಿ ದಿನ ಹೊಟ್ಟೆ ಪಾಡಿಗೆ ಭಾರ ಎತ್ತೋದು ಎಷ್ಟು ಕಷ್ಟ ಅಂತ ಈಗ ಸ್ವಲ್ಪ ತಿಳಿದೆ.  ನಮ್ಮ ಐಷಾರಾಮದ ಬದುಕಲ್ಲಿ ಬಡವರ ಚಿಂತೆ ತಿಳ್ಕೊಳ್ಳೋದು ತುಂಬಾ ಕಡಿಮೆ ಅನ್ನಿಸ್ತು.  

Saksham setting the pace
ಚಾರಣದ ಗತಿ ನಿರ್ಧರಿಸಿದ ಸಕ್ಷಮ್ 


After about an hour of climbing, we stopped at a place to snack and drink water. Dilip said he would no more want to climb, and chose to stop.  The attendant who was carrying our food pack chose to stay back with Dilip, on the pretext of giving him company, even though Dilip said he would be fine by himself.  We too didn't insist that the boy join us, and left.  After duly leaving behind enough provisions for them both. 

ಒಂದು ಗಂಟೆಯ ಕಾಲ ಹೀಗೆಯೇ ಹತ್ತಿ ಒಂದೆಡೆ ನೀರಿಗಾಗೇ ನಿಂತೆವು.  ಸ್ವಲ್ಪ ತಿಂಡಿಯು ತಿಂದಾಯಿತು.  ಇಲ್ಲಿಂದ ಮುಂದ ನಾನು ಹತ್ತೋಲ್ಲ ಅಂತ ದಿಲೀಪ್  ಹೇಳಿದರು. ಅವರ ವಯಸ್ಸು ಮತ್ತು ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ನಾನೂ ಸಹ ಅವರನ್ನು ಮುಂದೆ ಹತ್ತಲು ಒತ್ತಾಯ ಮಾಡಲಿಲ್ಲ.  ಅವರೊಂದಿಗೆ ನಮ್ಮ ಜೊತೆಗೆ ಬಂದಿದ್ದ ಸಹಾಯಕನೂ ಉಳಿಯುತ್ತೇನೆಂದ.  ಅವರಿಗೆ ಸಾಕಾಗುವಷ್ಟು ತಿಂಡಿ, ನೀರನ್ನು ಬಿಟ್ಟು, ನಾವು ಮೂವರು ಮುನ್ನಡೆದೆವು.  


Suresh bringing up the rear
ಎಲ್ಲರ ಹಿಂದೆ ಸುರೇಶ್ ಕಾವಲು 

As we climbed up further, the progress was slower, as the terrain became steeper.  plus the path was strewn with umpteen roots of the trees, and it was pretty easy to get our foot entangled in them.  Thankfully, there was no sun beating down our faces, and all the sunscreen that I had splattered on to my face was possibly not needed.  I took a break each time after climbing about 100-200 steps.  It helped me catch my breath, and give respite to my legs, and creaking knees.  When I climbed some steep portions, I wondered how I would fare while returning.  For those with knee issues, it's descending that poses more and greater challenges than climbing up.  Regardless, on and up I went.  

ಹೆಚ್ಚು ಮೇಲೆ ಹತ್ತಿದಷ್ಟೂ ನಮ್ಮ ನದಿಗೆ ಕುಂಠಿತವಾಗುತ್ತ ಸಾಗಿತು. ಏರುವಿಕೆ ಕಡಿದಾಗಿತ್ತು, ಮತ್ತು ನಮ್ಮನ್ನು ಇನ್ನಷ್ಟು ಆಯಾಸಗೊಳಿಸ್ತಿತ್ತು. ಹಾದಿಯಲ್ಲೆಲ್ಲ ಹಾವುಗಳಂತೆ ಹರಡಿದ್ದ ಮರಗಳ ಬೇರುಗಳು ಸಹ ನಮ್ಮ ನಡಿಗೆಯನ್ನು ನಿಧಾನ ಮಾಡ್ತಿದ್ದವು.  ದೇವರ ದಯೆ, ಮರಗಳ ನೆರಳಿನಿಂದಾಗಿ ಬಿಸಿಲು ನಮ್ಮನ್ನು ತಟ್ಟುತ್ತ ಇರಲಿಲ್ಲ.  ಬೆಳಿಗ್ಗೆ ಮುಖಕ್ಕೆ ಬಡಿದಿದ್ದ ಸನ್ ಸ್ಕ್ರೀನ್ ಬೇಡವಾಗಿತ್ತೇನೋ ಅನ್ನಿಸ್ತಾ ಇತ್ತು.  ಪ್ರತಿ ನೂರಿನ್ನೂರು ಹೆಜ್ಜ ಆದ್ಮೇಲೆ ನಾನು ನಿಲ್ಲ್ತಾ ಇದ್ದೆ.  ನನ್ನ ಕುಂಟು ಮಂಡಿಗಳ ಬಗ್ಗೆ ನನಗೆ ಇದ್ದ ಕಾಳಜಿ ಅದು.  ಹತ್ತುವುದು ಕಡಿದಾದಾಗಲೆಲ್ಲ ನಾನು ಇಳಿಯೋದರ ಬಗ್ಗೆ ಯೋಚಿಸ್ತಾ ಇದ್ದೆ, "ಹೇಗಪ್ಪಾ" ಅಂತ.  ಮೊಳಕಾಲು ತೊಂದರೆ ಇರುವವರಿಗೆ ಹತ್ತೊಕಿಂತ ಇಳಿಯೋದೇ ಹೆಚ್ಚು ಕಷ್ಟದ ವಿಷಯ. ಆದ್ರೂ ನಿಲ್ಲೋ ಯೋಚನೆ ಇಲ್ಲದೆ ಮುಂದೆ ಹತ್ತುತ್ತ ಹೋದೆ. 

Whenever Saksham and I managed to keep pace together - on flat surfaces that interspersed the steep climbs, we exchanged thoughts regarding music and sports.  I came to know that his friend and classmate's father was my colleague in the service (made me feel quite ancient too).  I learnt that he was an adrenaline junkie, and loved adventure sports.  I shuddered at the thought of doing any of the bungee jumps or skydiving myself.  

ಆಗೀಗೊಮ್ಮೆ ಸಕ್ಷಮ್ ಮತ್ತು ನಾನು ಜೊತೆ-ಜೊತೆಗೆ ನಡೀತಾ ಇದ್ದೆವು.  ಆಗ ನಾವು ನಮ್ಮ ಸಂಗೀತ ಮತ್ತು ಆಟೋಟ ಒಲವಿನ ಬಗ್ಗೆ ಮಾತಾಡ್ತಾ ಸಾಗಿದೆವು. ಅವನ ಸಹಪಾಠಿಯ ತಂದೆ ನನ್ನ ಸಹೋದ್ಯೋಗಿ ಅಂತ ಗೊತ್ತಾಯಿತು (ನಾನೊಂದು ಪಳೆಯುಳಿಕೆ ಅನ್ನೋ ಭಾವನೆ ಮನಸ್ಸಿಗೆ ಬಂದು ಹೋಯಿತು). ಸಕ್ಷಮ್ ತನ್ನ 

Sharing smiles over selfie
ಸ್ಮೈಲ್ ಪ್ಲೀಸ್ 


After an arduous climb of another hour, we stopped for breakfast at a place where the forest department had made a clearing, and erected some crude benches (and even placed a trash bin for good measure).  We took in the views around us, and ate a few sandwiches, and rested for a while.  We had to continue further.  Saksham showed us that there was another peak beyond the Saddle Peak, where one had to get off this peak, walk on a narrow path, and reach the other hill.  

"Want to do that, Sir?" 

"Let me survive this ordeal first.  Then maybe I will think of taking up another challenge".

ಮತ್ತೊಂದು ಗಂಟೆ ಹತ್ತಿದ ನಂತರ ತಿಂಡಿ ತಿನ್ನಲೆಂದು ನಿಂತೆವು.  ಸಮತಟ್ಟಾದ ಜಾಗದಲ್ಲಿ  ಅರಣ್ಯ ಇಲಾಖೆಯವರು  ಕೋರಲೆಂದು ಮರದ ಬೆಂಚಿನ ವ್ಯವಸ್ಥೆ ಮಾಡಿದ್ದರು.  ಕಸ ಎಸೆಯಲು ಒಂದು ಬುಟ್ಟಿ ಸಹ ನೆಟ್ಟಿದ್ದರು.  ನಮಗೆ ಮುಂಚೆ ಇಲ್ಲಿಗೆ ಬಂದಿದ್ದವರು ಸಾಕಷ್ಟು ಪ್ಲಾಸ್ಟಿಕ್ ಕಸ ಬಿಟ್ಟು ಹೋಗಿದ್ದರು.  ಸುರೇಶ ಮತ್ತು ನಾನು ಅವನ್ನೆಲ್ಲ ಬಾಚಿ ಕಟ್ಟಿ, ಬುಟ್ಟಿಗೆ ಹಾಕಿದೆವು.  ತಿಂದು, ಕೊಂಚ ಹೊತ್ತು ದಣಿವಾರಿಸಿಕೊಂಡು, ಮತ್ತೆ ಹತ್ತಲು ಎದ್ದೆವು.  ಈ ಜಾಗದಿಂದ ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟಕ್ಕೆ ಹೋಗಲಿರುವ  ಹಾದಿಯೊಂದನ್ನು ಸಕ್ಷಮ್ ನಮಗೆ ತೋರಿಸಿದ.  

"ಅದನ್ನೂ ಹತ್ತೋಣವೇ ಸರ್?" ಎಂದ. 

"ನೋಡುವ.  ಮೊದಲು ಈ ಸವಾರಿಯನ್ನು ಮುಗಿಸಿದ ನಂತರ ಇನ್ನೂ ತ್ರಾಣ ಇದ್ದಾರೆ", ಎಂದೆ. 

I just then noticed that clouds had slowly started gathering in the sky, and they were getting darker by the minute.  We quickened our pace, and hiked faster.  We wanted to beat the rains to the top. Saddle Peak does not offer much from the perspective of panoramic views, or astounding sights.  It essentially is a trek to perform to claim bragging rights that you have been to the highest point in the Andaman islands.  

ಸುತ್ತ ನೋಡುವಾಗ ಕಪ್ಪನೆ ಮೋಡಗಳು ಆವರಿಸುತ್ತಾ ಇರೋದು ಸಹ ಕಾಣಿಸಿತು.  ಕಾಲ ಕಳೆದಂತೆ ಅವು ಇನ್ನಷ್ಟು ಹೆಚ್ಚಾಗಿ, ದಟ್ಟವಾಗಿ ಕವಿದವು.  ನಮ್ಮ ಹತ್ತುವ ವೇಗವನ್ನು ಹೆಚ್ಚು ಮಾಡಿದೆವು. ಮಳೆಯಲ್ಲಿ ಸಿಲುಕಿಕೊಂಡರೆ ಕಷ್ಟ ಎಂದು.  ಈ ಬೆಟ್ಟದಲ್ಲಿ ನೋಡಲು ಏನೂ ಒಳ್ಳೆಯ ನೋಟಗಳು ಕಾಣ ಸಿಗುವುದಿಲ್ಲ.  ಸುತ್ತಲೂ ದಟ್ಟ ಕಾಡು ಮತ್ತು ಮರಗಳೇ ಕಾಣುತ್ತವೆ. ಎಲ್ಲೋ ಒಂದೆರಡು ಕಡೆ ಬೇರೆ ದೃಶ್ಯಗಳು ಕಂಡವಷ್ಟೇ. ಕೇವಲ ಬಡಾಯಿ ಕೊಚ್ಚಿಕೊಳ್ಳಲು ಮಾತ್ರ ಇದನ್ನು ಹತ್ತಲು ಬರಬೇಕು. 

A view of the sea from the top
ಎತ್ತರದಿಂದ ಕಡಲ ವಿಹಂಗಮ ನೋಟ 

We were at least half an hour away from the top when it slowly started drizzling.  The path had become narrower, and darker too.  The trees reached heights of over 40 feet, and some were easily taller than 100 ft. They formed a thick canopy, and their serpentine roots crisscrossed all over the ground.  Padauk trees (Andaman redwood) are endemic to Andaman Islands, and they were found in plenty.  Their wood is supposedly very dense. It is now a protected tree, as indiscriminate felling has resulted in it becoming a vulnerable species in the forests.  

ಬೆಟ್ಟದ ತುದಿಗೆ ಇನ್ನೂ ಅರ್ಧ ತಾಸು ನಡಿಗೆಯಿದ್ದಂತೆಯೇ ಮಳೆ ಹನಿ ಮೊದಲಾಯಿತು. ನಮ್ಮ ಹಾದಿ ಸಹ ದುರ್ಗಮವಾಗಿಯೇ ಸಾಗಿತ್ತು.  ಮರಗಳು ಇಲ್ಲಿ ನೂರಕ್ಕೂ ಹೆಚ್ಚು ಅಡಿಗಳು ಬೆಳೆದಿದ್ದವು. ಪಡೋಕ್ ಎಂಬ ಮರ ಅಂಡಮಾನ್ ದ್ವೀಪಗಳಲ್ಲಿಯೇ ಕಾಣಲು ಬರುವಂಥದ್ದು.  ಈ ಮರಗಳು ಸುತ್ತಲೂ ತುಂಬಿದ್ದವು. ಈ ಗಟ್ಟಿಯಾದ ಮರಕ್ಕೆ ಬಹಳ ಬೇಡಿಕೆ ಉಂಟು.  ಹಿಂದಿನ ದಿನಗಳಲ್ಲಿ ಎಗ್ಗಾ-ಮುಗ್ಗ ಈ ಮರಗಳನ್ನು ಕಡಿದಿದ್ದರಿಂದ ಈಗ ಈ ಮರಗಳ ಉಳಿವಿಗೆ ಸಂಚಕಾರ ಬಂದಿದೆ.  

By around 10:30, we reached the pinnacle of the Saddle Peak.  It didn't feel like I had achieved anything.  There was nothing to show that we were at the top.  Thankfully, some previous climbers had left behind our national flag at one of the trees.  We took turns to hold it and get clicked, just to declare we had arrived! However, when we looked at these pictures after we returned, we all felt a high of having achieved something significant - a feeling that was missing when we had actually climbed. 

ಸುಮಾರು ೧೦:೩೦ರ ವೇಳೆಗೆ ನಾವು ಬೆಟ್ಟದ ತುತ್ತತುದಿ ತಲುಪಿದೆವು.  ಏನೋ ದೊಡ್ಡ ಸಾಧನೆ ಮಾಡಿದ್ದೆವು ಅಂತ ಅನ್ನಿಸಿರಲಿಲ್ಲ.  ಬೆಟ್ಟದ ತುದಿ ಇದೇ ಎಂದು ತೋರಲು ಏನೂ ಇರಲಿಲ್ಲ ಸಹ. ಮುಂಚೆ ಬಂದಿದ್ದ ಚಾರಣಿಗರು ದೇಶದ ಬಾವುಟವೊಂದನ್ನು ಬಿಟ್ಟು ಹೋಗಿದ್ದರು.  ಅದನ್ನೇ ನಾವು ಆನಂದದಿಂದ ಆಚೀಚೆ ಆಡಿಸಿ, ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟೆವು. ಬೆಟ್ಟ ಇಳಿದು ಹಿಂದಕ್ಕೆ ಬಂದ ನಂತರ ಏನೋ ಒಳ್ಳೆಯದನ್ನು ಸಾಧಿಸಿದ ಭಾವನೆ ತುಂಬಿತ್ತು. 

Atop. At last!
ಅಂತೂ ಇಂತೂ... 

While I was done climbing, Saksham wanted to go further and get off the saddle, climb another peak and return.  I declined to accompany him.  He set off alone, while Suresh, the driver and I, chose to start our descent.  Soon, the drizzle had become an intense rain.  We were soaked fully wet.  There was not much of a shelter anywhere to stand and save ourselves from getting drenched.  Thankfully, the intense rain stopped soon enough, and we gingerly started walking down. 

 ನನಗೆ ಇನ್ನು ಹತ್ತುವುದು ಸಾಕಾಗಿತ್ತು. ಆದರೆ ಸಕ್ಷಮನಿಗೆ ಇನ್ನೂ ಮುಂದಕ್ಕೆ ಹೋಗುವ ಆಸೆ ಇತ್ತು. ಇಲ್ಲಿಂದ  ಬೆಟ್ಟಕ್ಕೆ ಸಾಗಿ ಹಿಂದೆ ಬರುವ ಆಲೋಚನೆ ಅವನದ್ದು.  ನಾನು ಬರಲ್ಲ ಅಂತ ಅಂದಿದ್ದಕ್ಕೆ ಅವನೊಬ್ಬನೇ ಹೋರಾಟ.  ಸುರೇಶ ಮತ್ತು ನಾನು ಹಿಂದಕ್ಕೆ ನಡೆಯಲು ಶುರು ಮಾಡಿದೆವು. ಮಳೆಯಲ್ಲಿ ಸಿಲುಕಬಾರದೆಂದುಕೊಂಡಿದ್ದರೂ, ಜೋರಾಗಿ ಬಿದ್ದ ಮಳೆ ನಮ್ಮನ್ನು ಸಂಪೂರ್ಣವಾಗಿ ತೋಯಿಸಿತ್ತು. ಗಟ್ಟಿ ಮಳೆ ಹೆಚ್ಚು ಹೊತ್ತು ಬೀಳಲಿಲ್ಲ. ನಿಂತ ಮೇಲೆ ನಿಧಾನವಾಗಿ ನಾವು ಮತ್ತೆ ಇಳಿಯಲು ಮೊದಲಿಟ್ಟಿವೆ.  

The joy of finishing the climb
ಚಾರಣ ಮುಗಿಸಿದ ಆನಂದ 

It was a herculean task to climb downhill.  We had to not only manage the steep gradient, but the ground that had become wet due to rain.  Wherever the leaves were shed in copious amounts by the trees, it was even more slippery.  One just had to step foot on the wet leaves to lose step, balance, and slide down.  I experienced it a couple of times.  Suresh found a sturdy branch that I could use as a balancing stick.  It surely helped many a times from falling down badly.  

ಬೆಟ್ಟ ಇಳಿಯುವುದು ಕ್ಲಿಷ್ಟದ ಕೆಲಸ.  ತೀರಾ ಇಳಿಜಾರು ಮಾತ್ರವೇ ಅಲ್ಲದೆ ಮಳೆಯಿಂದ ನೆಂದಿದ್ದ ಭೂಮಿಯ ಮೇಲೆ ನಾವು ಜಾಗ್ರತೆಯಿಂದ ಹೆಜ್ಜೆ ಇಡಬೇಕಿತ್ತು.  ಮಳೆಯಲ್ಲಿ ನೆಂದ ಎಳೆಗಳ ರಾಶಿಯೆಲ್ಲಾ ನಮ್ಮ ಹೆಜ್ಜೆಗಳನ್ನು ಚೆನ್ನಾಗಿ ಜಾರಿಸುತ್ತಿದ್ದವು.  ಹಲವಾರು ಕಡೆ ನಾನು ಹೀಗೆಯೇ ಜಾರಿದೆ. ನಾನು ಜಾರದಿರಲೆಂದು ಸುರೇಶ ಎಲ್ಲೋ ಬಿದ್ದಿದ್ದ ಒಣಗಿದ ರೆಂಬೆಯೊಂದನ್ನು ತಂದು ಕೊಟ್ಟ.  ಇದರ ಸಹಾಯದಿಂದ ನಾನು ನನ್ನ ಸಮತೋಲನ ಕಾಪಾಡಿಕೊಂಡು ಇಳಿಯುತ್ತ ಹೋದೆ.  

A coral that was found deep in the woods
ಕಾಡಲ್ಲಿ ಕಂಡ ಹವಳದ ಕಲ್ಲು 


After falling a few times, and sliding down a few times more, stopping for clicking pictures, and shooting a few videos, and resting once a while to give rest to the sore knees, we reached the flat grounds near the stream in about two hours.  The rain had started again. Dilip and the attendant were at the stream.  We stopped to catch our breath, drink some water - what we were carrying was over, and we drank from the running stream -  and eat some more.  Saksham was still not with us.  

ಹೀಗೆ ಜಾರುತ್ತ, ಬೀಳುತ್ತಾ, ಅಲ್ಲಲ್ಲಿ ಚಿತ್ರ-ವಿಡಿಯೋ ತೆಗೆಯಲು ನಿಲ್ಲುತ್ತಾ, ಮತ್ತು ಆಗಾಗ ಬಡ ಮಂಡಿಗಳಿಗೆ ವಿಶ್ರಾಮ ನೀಡುತ್ತಾ, ಸುಮಾರು ೨ ತಾಸುಗಳಲ್ಲಿ ನಾವು ಕೆಳಕ್ಕೆ ಇಳಿದು ಸಣ್ಣ ಝರಿಯ ಬಳಿಗೆ ತಲುಪಿದೆವು.  ದಿಲೀಪ್ ಮತ್ತು ನಮ್ಮ ಸಹಾಯಕ ಇಲ್ಲಿಗೆ ಬಂದು ನಮ್ಮ ದಾರಿ ಕಾಯುತ್ತ ಇದ್ದರು. ಮಳೆ ಮತ್ತೆ ಮೊದಲಾಗಿತ್ತು.  ಆದರೂ, ನೀರು ಕುಡಿದು, ಇದ್ದ ಮಿಕ್ಕ ತಿಂಡಿ-ಹಣ್ಣುಗಳನ್ನು ತಿಂದು, ದಣಿವು ದೂರ ಮಾಡಿಕೊಂಡೆವು. ಸಕ್ಷಮ್ ಇನ್ನೂ ದೂರದಲ್ಲಿಯೇ ಇದ್ದ. 

Surprisingly, BSNL signal worked at many places, while neither Jio nor Airtel could catch signal anywhere.  However, there was no signal once the trek had started even on BSNL phones, and hence we weren't able to contact Saksham.  We chose to head back to the starting point of the trek.  This meant that Saksham had to walk back alone all through.  This usually is not how most treks work.  But, Saksham was a seasoned trekker, and as he had said himself, he had scaled the Saddle Peak three times already, and this was his fourth time.  

ಆಶ್ಚರ್ಯವೆಂದರೆ, ಇಲ್ಲಿ ಕೆಲಸ ಮಾಡ್ತಾ ಇತ್ತು - ಬಿ.ಯಸ್. ಎನ್. ಎಲ್. ಮಾತ್ರ, ಮಿಕ್ಕವುಗಳ ಸದ್ದಿರಲಿಲ್ಲ. ಸಕ್ಷಮ್ ಜೊತೆ ಆದರೆ ಮಾತಾಡಲು ಆಗಲಿಲ್ಲ. ಅವನನ್ನು ಬಿಟ್ಟೇ  ನಾವು ಚಾರಣ ಎಲ್ಲಿಂದ ಆರಂಭಿಸಿದ್ದೆವೋ ಅಲ್ಲಿಗೆ ವಾಪಾಸ್ ಹೋಗಲು ಎದ್ದೆವು.  ಸಕ್ಷಮ್ ಒಳ್ಳೆಯ ಚಾರಣಕಾರ; ಅವನೊಬ್ಬನೇ ಬರಬಲ್ಲ ಎಂಬ ಧೈರ್ಯ ಇತ್ತು, ಯಾಕೆಂದರೆ ಇದು ಈ ಬೆಟ್ಟಕ್ಕೆ ಬರುವ ಅವನ ನಾಲ್ಕನೇ ಟ್ರಿಪ್ ಆಗಿತ್ತು. 

Walking back in wet clothes and shoes was not easy.  The four kilometre walk through the woods was laboured, and took more than an hour.  When we reached our vehicle, it was almost 2pm. It had taken a good 8 hours to trek up and down.  Not a bad job for someone with a host of issues with every limb, I beamed. I had survived the challenge.  Of course my knees were hurting, thanks to all the falls and slides, apart from climbing.  What was I even thinking when I had chosen to do this! For an able bodied person though, this is quite an easy trek. 

ನೆಂದ ಬಟ್ಟೆ ಮತ್ತು ಶೂಗಳಲ್ಲಿ ನಡೆಯೋದು ಸುಲಭ ಅಲ್ಲ. ನಾಲ್ಕು ಕಿಲೋಮೀಟರ್ ದೂರ ನಡೆಯೋಷ್ಟ್ರಲ್ಲಿ ಕಾಲುಗಳು ಬಿದ್ದು ಹೋದವೇನೋ ಅನ್ಸಿತ್ತು. ನಮ್ಮ ಕಾರಿನ ಹತ್ತಿರ ಬರೋ ಹೊತ್ತಿಗೆ ಗಂಟೆ ೨ ಆಗಿತ್ತು. ಮೇಲೆ ಹತ್ತಿ ಇಳಿಯಲು ನಮಗೆ ೮ ತಾಸಿನ ಮೇಲೆ ಆಗಿತ್ತು. ಅಂತಹ ಕಷ್ಟದ ಚರಣವೇನೂ ಅಲ್ಲ ಇದು, ಹೇಳಬೇಕೆಂದರೆ. ಆದರೆ, ಹಲವಾರು  ತೊಂದರೆಗಳಿದ್ದ ನನ್ನಂಥವನಿಗೆ ಇದು ದೊಡ್ಡ ಸಾಧನೆಯೇ ಸರಿ. ಮಂದಿಗಳು, ಮೈಯೆಲ್ಲಾ ನೋವುತ್ತಿದ್ದರೂ ಈ ಚಾರಣದ ಸವಾಲನ್ನು ನಾನು ಗೆದ್ದೆನೆಂಬ ಭಾವನೆಯಿಂದ ಬೀಗಿದೆ. 

Dilip at Lamiya Bay.  Notice the grey sand?

Suresh suggested that he would drop Dilip and I back at the guesthouse and return to pick up Saksham.  I vacillated a bit; but hunger and tiredness won, and I said yes.  In the end, my fear didn't come true, thankfully.  Hot food was waiting for us at the guesthouse, but first I headed out for a good hot shower, to wash off the dirt and grime, and the tiredness of the body.  Post lunch, I only know washing my hands.  I had not known when I had crashed on to bed and slept for three hours straight, until it was time to wake up for some late tea. 

ಸುರೇಶ ನಮ್ಮನ್ನು ವಸತಿಗೃಹಕ್ಕೆ ಹಿಂದಕ್ಕೆ ಕೊಂಡೊಯ್ಯ್ಟ್ಟೆನೆಂದು ಹೇಳಿದ - ಸಕ್ಷಮ್ ಬರುವುದು ಇನ್ನೂ ಹೊತ್ತಾಗುತ್ತೆ ಅಂತ. ಒಂದು ನಿಮಿಷ ಮನಸ್ಸು ತೋಲಾಡಿದರೂ, ಆಯಿತು ಅಂತ ಒಪ್ಪಿಕೊಂಡೆ. ಹೊಟ್ಟೆ ಹಸಿದಿತ್ತು, ದೇಹ ದಣಿದಿತ್ತು ಆದ ಕಾರಣ.  ನಾವು ತಲುಪುವ ವೇಳೆಗೆ ಬಿಸಿ ಬಿಸಿ ಅಡಿಗೆ ರೆಡಿ ಆಗಿತ್ತು.  ಆದರೆ ಮೊದಲು ಬಿಸಿ ಬಿಸಿ ನೀರಿನ ಸ್ನಾನ ಬೇಕಿತ್ತು, ಕೊಳೆ ತೆಗೆಯಲು ಮತ್ತು ಬಿಗಿಸಿದ್ದ ಮೈ ಸಡಿಲ ಮಾಡಲು.  ಊಟ ಆದ ನಂತರ ಯಾವ ಮಾಯದಲ್ಲೋ ನಿದ್ದೆ ಹೋಗಿದ್ದೆ. ಮತ್ತೆ ಟೀ ಕುಡಿಯಲು ಎದ್ದಾಗ ಕತ್ತಲಾಗಿತ್ತು. 

The next day, as we left Diglipur for Port Blair, I felt sad that we couldn't go and see the Ross and Smith islands and walk across the sandbar.  I resolved, if I stay beyond the monsoons, I will come again and do that too.  Coming to the islands had only lengthened my bucketlist.  Some I have already scored - including seeing the Indira Point, and the Barren Island volcano.  Some like Narcondam, Parrot Island, and Alfred Caves are still pending.  Time to make them happen before I am sent away from the islands. 

ಮಾರನೇ ದಿನ, ದಿಗ್ಲಿಪುರದಿಂದ ಹಿಂದಕ್ಕೆ ಹೊರಟಾಗ, ನನಗೆ ರೋಸ್ ಮತ್ತು ಸ್ಮಿಥ್ ದ್ವೀಪಗಳ ಮರಳು ದಿಂಡಿನ ಮೇಲೆ ನಡೆಯಲಾಗಲಿಲ್ಲ ಎಂಬ ಕೊರತೆ ಕಾಡಿತು.  ಈ ದ್ವೀಪಗಳಿಗೆ ಬಂದಾಗಿನಿಂದ ನಾನು ನೋಡ-ಮಾಡಬೇಕೆಂದುಕೊಂಡಿರುವ ವಿಷಯಗಳ ಪಟ್ಟಿ ಬೆಳೆಯುತ್ತಲೇ  ಹೋಗಿದೆ. ಅದರಲ್ಲಿ ಕೆಲವೊಂದು ಮಾಡಿಯೂ ಇದ್ದೇನೆ - ಇಂದಿರಾ ಪಾಯಿಂಟ್, ಮತ್ತು ಬಾರ್ರೆನ್ ದ್ವೀಪ ಪ್ರಯಾಣ. ಆದರೆ ಇನ್ನೂ ನಾರ್ಕೊಂಡಂ, ಗಿಳಿಗಳ ದ್ವೀಪ, ಮತ್ತು ಆಲ್ಫ್ರೆಡ್ ಗುಹೆಗಳನ್ನು ನೋಡುವುಡ್ ಬಾಕಿ ಇದೆ.  ಇಲ್ಲಿಂದ ನನ್ನ ಎತ್ತಂಗಡಿ ಆಗೋ ಮುಂಚೆ ನೋಡಬೇಕು ಅನ್ನೋದು ನನ್ನ ಬಯಕೆ. 

As I finish writing this piece, I asked myself, if this was the last trek I would ever be doing, considering my delicate limbs and joints.  Even as I type this, I am readying myself to go under the scalpel for the troubles in the left knee.  Maybe once I am transferred back, but not immediately.  Initially when I had returned from the trek, I was certain it possibly would be my last.  Now, I know it would not be.  However, I still dream of not just trekking up a few more places, but also get back to some hard running and half marathons.  What is life without dreams or challenges? And, tougher the challenges, and difficult the dreams, the happier you are when you attain or overcome them. What do you say, folks?

ಸರಿ, ಚಾರಣದ ಬಗ್ಗೆ ಬರೆಯೋದು ಮುಗಿಯಿತು. ಚಾರಣ ಮಾಡಿದ ದಿನ ನನ್ನನ್ನು ನೀವೇನೆಯಾದರೂ 'ಮತ್ತೆ ಬೆಟ್ಟ-ಗುಡ್ಡಹತ್ತುತ್ತೀಯ?', ಅಂತ ಕೇಳಿದ್ದಿದ್ದರೆ, ನಾನು 'ಖಂಡಿತ ಇಲ್ಲ; ಇನ್ನು ಸಾಕು', ಅಂತಾ ಇದ್ದೆ.  ನನ್ನ ಮೂಳೆ-ಕೀಲುಗಳು ನನ್ನ ಆಸೆಗಳನ್ನು ಬೆಂಬಲಿಸೋಲ್ಲ ಅಂತ. ಮತ್ತೆ ಬೆಂಗಳೂರಿಗೆ ಹಿಂತಿರುಗಿದ ಮೇಲೆ ನನ್ನ ಎದ ಮಂದಿಯ ಆಪರೇಷನ್ ಸಹ ಮಾಡಿಸಿಕೊಳ್ಳೋದಿದೆ. ಆದರೂ, ನನ್ನ ಆಸೆಗಳು ಚಿಗುರುತ್ತಾಳೆ ಇರುತ್ತವೆ.  ಬರೀ ಬೆಟ್ಟ ಹತ್ತೋದು ಮಾತ್ರವೇ ಅಲ್ಲ.  ನನಗೆ ಮತ್ತೆ ಮ್ಯಾರಥಾನ್ ಓಡುವ ಬಯಕೆ ಉತ್ಕಟವಾಗಿಯೇ ಇದೆ.  ಕನಸುಗಳು ಮತ್ತು ಸವಾಲುಗಳು ಇಲ್ಲದ ಬದುಕು ನೀರಸ, ಅಲ್ಲವೇ? ಹಾಗೆಯೇ ಈ ಕನಸುಗಳು ಮತ್ತು ಸವಾಲುಗಳು ಕಷ್ಟವಲ್ಲದೆ ಸುಲಭವಾಗಿದ್ದರೆ, ಅವುಗಳನ್ನು ನನಸು ಮಾಡುವ, ಗೆಲ್ಲುವ ಆಸೆ ಎಲ್ಲಿ ಬರುತ್ತೆ? ಏನಂತೀರಾ, ಗೆಳೆಯ-ಗೆಳತಿಯರೆ?

P. S. I am heading out to Vietnam in a day. In order to post this before I set off, I am typing in a hurry, and translating it too, as I type.  There would be gaps, multiple errors.  Please bear with me!






Sunday, July 07, 2024

The New Pandemic

 Friend: Have you been following the Ambani family wedding?

Me: I don’t need to follow. The updates follow me (and everyone) everywhere. No media spared. See, you too have become one!

Friend: Gosh! You and your humour. I wish there was a cure!

Me: Is my humour that ailing?

Friend: I meant that wedding! Happening in so many phases. 

Me: Ah! I agree. It’s the latest pandemic to hit us. Wish there were vaccines for that too. 


#tinytales

Friday, July 05, 2024

Mounting Up the Saddle ಸ್ಯಾಡ್ಲ್ ಪೀಕ್ ಚಾರಣದ ಹೂರಣ: ಭಾಗ ೧

ಪೀಠಿಕೆ ಮತ್ತು ಸಿದ್ಧತೆ: 'ಇದೇನು ಯುದ್ಧಕ್ಕೆ ತಯಾರಿಯೇ?'

Prologue and Preparations: "Feels like I'm Off to a Battle!"

"ಈಗಿರೋ ತೊಂದ್ರೆಗಳು ಸಾಲ್ದಾ? ಇನ್ನೂ ಬೆಟ್ಟ ಹತ್ತೋ ಆಸೆ ಯಾಕೆ" ಅಮ್ಮ ಫೋನ್ ನಲ್ಲಿ  ಗದರಿದಳು. ಎಲ್ಲಿ ಹೋಗುವುದಿದ್ದರೂ ತಂದೆ-ತಾಯಿಗೆ ತಿಳಿಸಿಯೇ ಹೋಗುವುದು ಮುಂದಿನಿಂದಲೂ ರೂಢಿಯಾಗಿತ್ತು.  ಹೇಳದೆ ಹೋದರೆ ಏನಾಗುತ್ತೋ ಅನ್ನೋ ಭಯ ಸಹ ಇರುತ್ತೆ ಅಲ್ಲವೇ? ಹೋದ ವರ್ಷ ಇದೆ ಸಮಯಕ್ಕೆ ನನ್ನ ಮೊಣಕಾಲಿಗೆ ಇನ್ನೊಂದು ಸರ್ಜರಿ ಆಗಿತ್ತು; ಅಮ್ಮ ಅದನ್ನೇ ನೆನಪಿಸಿದಳು.  "ಕಷ್ಟ ಅನ್ಸಿದ್ರೆ ಹತ್ತೋಲ್ಲ ಅಮ್ಮಾ", ಎಂದೆ.  "ಎಷ್ಟು ಹೇಳಿದ್ರೂ ಕೇಳಲ್ಲ. ಏನಾದ್ರೂ ಮಾಡ್ಕೋ", ಅಮ್ಮ ಗೊಣಗುತ್ತಲೇ ಫೋನ್ ಇಟ್ಟಳು.  

"You've just recovered recently.  Aren't the troubles you already have enough to deal with?What's the need to scale a peak?" mom expressed her concern and disapproval.  I preferred to inform parents before heading out anywhere; there always lurked a fear inside me that some terrible fate would await me if I wouldn't inform. "Don't worry mom.  If I find it difficult to climb, I'll return without trying too hard".  She wasn't impressed.  "Do whatever you feel like.  When have you heeded to any good advice?", she grumbled as she disconnected the call.  

ಯಾವುದು ಕಷ್ಟವೋ, ಬೇಡ ಎಂಬ ಉತ್ತರ ಸಿಗುತ್ತೋ ಅದನ್ನೇ ಮಾಡುವ ಬಯಕೆ ಮನುಷ್ಯನಿಗೆ ಯಾಕೆ ಬರುತ್ತೋ ನಾ ಕಾಣೆ.  ಎಲ್ಲ ಮನುಷ್ಯರೂ ಹೀಗೋ ಅಥವಾ ಕೆಲವರು ಮಾತ್ರವೇ ಹೀಗೆ ಆಡ್ತಾರೋ ಗೊತ್ತಿಲ್ಲ.  ನಾನೇನೂ ಮುಂಚಿನಿಂದ ಹೀಗಿರ್ಲಿಲ್ಲ.  ಚಿಕ್ಕವನಿದ್ದಾಗ ನನ್ನ ಕೈಲಿ ಏನೂ ಆಗ್ತಾ ಇರ್ಲಿಲ್ಲ.  ಯಾವ ಆಟ ಆಡಿದ ನೆನಪು ನಂಗಿಲ್ಲ.  ಸೈಕಲ್ ತುಳಿಯುವುದು ಕಲಿಯೋಕೂ ಕಷ್ಟ ಪಟ್ಟಿದ್ದೆ.  ಬರೀ ಪುಸ್ತಕ ಕೈಲಿ ಹಿಡಿದು ಅದು ತೋರುವ ಜಗತ್ತಲ್ಲಿ ಕಳೆದು ಹೋಗ್ತಾ ಇದ್ದೆ.  ೨೧ರ ಹರೆಯದಲ್ಲೂ ೫೦ ಕೆಜಿ ತೂಕ ಇರ್ಲಿಲ್ಲ ನಾನು.  ಇನ್ನೆಂಥ ಸಾಹಸ ನನ್ನಿಂದ ಆಗ್ತಾ ಇತ್ತು!! ಹೀಗೆ ಏನೂ ಆಗದವನಂತೆ ಇದ್ದ ನಾನು ಇದ್ದಕ್ಕಿದ್ದಂತೆ ಮುಪ್ಪು ಬರುವಂಥ ವಯಸ್ಸಲ್ಲಿ ಬೆಟ್ಟ, ಗುಡ್ಡ, ಈಜು, ಓಟ ಎಂದು ತಿರುಗಿದರೆ ಹೆತ್ತವರಿಗೂ ಏನೋ ಆಗಿದೆ ಇವನಿಗೆ ಅನ್ಸೋದು ಸಾಮಾನ್ಯನೇ.  

Why do people try to do what is difficult or forbidden? What kind of satisfaction is hidden inside in attempting to crack a tough nut? Are all people similar in this aspect, or is it just a few? I don't know about others, but I wasn't always like this.  As a puny child while growing up, even learning how to cycle was a huge task for me, and something that I didn't relish but only learnt because of the ridicule faced.  I would usually be found lost in the world of books while growing up.  As someone who weighed less than 50 kg when I became an adult at 21, even if I desired to, adventure wasn't exactly something I could attempt! Now, when I was nearing my age of retirement I wanted to try new things, scale a peak here, or attempt a marathon there, even learn swimming and try diving into the ocean.  No wonder my mom wasn't too impressed.  

ಹೌದು, ಇದ್ದಕ್ಕಿದ್ದಂತೆ ಈ ತರದ ಬದಲಾವಣೆ ಹೇಗೆ ಬಂತು ಅಂತ ಕೇಳ್ತೀರಾ? ಅದನ್ನ ಇನ್ನೊಂದು ಬರೆಹಕ್ಕೆ ಇಟ್ಟುಕೊಳ್ಳೋಣ.  ಇಲ್ಲ ಅಂದ್ರೆ ಅದೇ ದೊಡ್ಡ ಕಥೆ ಆಗುತ್ತೆ! ಸಧ್ಯಕ್ಕೆ ಈ ಲೇಖನವನ್ನ ಬರೀ ನನ್ನ ದಿಗ್ಲಿಪುರದ ಪುರಾಣದ ಬಗ್ಗೆ ಬರೆಯಲು ಉಪಯೋಗಿಸುತ್ತೇನೆ.  

I will refrain from narrating how I became an active person interested in fitness and sport from an absolute bookworm.  I don't even know if it would make interesting reading.  Maybe I will keep it for another day, even if I choose to write about it.  For now, my focus is on narrating my dalliance with Diglipur (should I call this piece, 'the Dance of Diglipur', considering my almost obsessive, unhealthy penchant for puns or rhymes?).

ದಿಗ್ಲಿಪುರ ಅಂಡಮಾನ್ ದ್ವೀಪಗಳ ಅತ್ಯಂತ ಉತ್ತರಕ್ಕೆ ಇರುವ ಊರು.  ಊರು ಅನ್ನೋಕಿಂತ ಹೋಬಳಿ-ಗ್ರಾಮ ಅಂದರೂ ನಡೆಯುತ್ತೆ.  ಆದರೆ, ಉತ್ತರ ಮತ್ತು ಮಧ್ಯ ಅಂಡಮಾನ್ ದ್ವೀಪಗಳಲ್ಲಿ ಇದೆ ದೊಡ್ಡ ಊರು. ಇದನ್ನು ಬಿಟ್ಟರೆ ಮಾಯಾಬಂದರ್ - ಇದು ಉತ್ತರ ಮತ್ತು ಮಧ್ಯ ಅಂಡಮಾನ್ ಜಿಲ್ಲಾ ಕೇಂದ್ರವೂ ಹೌದು.  ಇಲ್ಲಿಯೂ ಸಹ ನಂಗೆ ಆಫೀಸ್ ಇದೆ. ಇಲ್ಲಿಗೂ ಕೆಲ್ಸದ್ ಮೇಲೆ ಹೋಗ್ಬೇಕಾಗುತ್ತೆ.  ಹಾಗೇನೇ ಮುಂದಿನ ಸಲ ಕೆಲಸದ ಮೇಲೆ ಹೋದಾಗ ಅಲ್ಲಿನ ಬೆಟ್ಟ ಹತ್ತಬೇಕು ಅಂತ ತೀರ್ಮಾನಿಸಿದ್ದೆ.  ಅದೇ ರೀತಿ ಯಾವುದೊ ಎಮರ್ಜೆನ್ಸಿ ಕೆಲಸಗಳ ಇನ್ಸ್ಪೆಕ್ಷನ್ ಮಾಡಬೇಕಿತ್ತು.  ದಿಗ್ಲಿಪುರಕ್ಕೆ ಹೋಗುವ ಪ್ಲಾನ್ ಸಿದ್ಧ ಆಯಿತು.  ಮಳೆಗಾಲ ಮೊದಲಾಗೋ ಮುಂಚೆ ಮುಗಿಸಬೇಕು ಅನ್ನೋ ತವಕ ಸಹ ಇತ್ತು.  ಇಲ್ಲ ಅಂದ್ರೆ ಮತ್ತೆ ನವೆಂಬರ್ ತಿಂಗಳ ವರೆಗೂ ಕಾಯಬೇಕು ಹತ್ತೋಕೆ.  ಅದು ಆಗದ ಮಾತು ಅಂತ ಅನ್ಸಿತ್ತು - ನನ್ನ ವರ್ಗಾವಣೆ ಅದಕ್ಕೆ ಮುಂಚೆ ಆಗುವ ಸಂಭವ ಇದೆ ಅಂತ ತಿಳಿದಿತ್ತು.  ಜತೆಗೆ ನನ್ನೊಂದಿಗೆ ಕೆಲಸ ಮಾಡ್ತಿದ್ದ ನನ್ನ ಉಪ ಸಲಹೆಗಾರ ಅಧಿಕಾರಿ ದಿಲೀಪ್ ಅವರ  ವರ್ಗಾವಣೆಯ ಆದೇಶ ಬಂದಿತ್ತು.  ಅವರಿಗೂ ದಿಗ್ಲಿಪುರಕ್ಕೆ ಹೋಗುವ ಆಸೆ ಇತ್ತು.  ಕೋಸ್ಟ್ ಗಾರ್ಡ್ ಆಫೀಸ್ ಗಳಿಗೆ  ದಿಲೀಪ್ ವಿತ್ತೀಯ ಸಲಹೆ ನೀಡುತ್ತಿದ್ದರು, ಮತ್ತು ದಿಗ್ಲಿಪುರದಲ್ಲಿ ಎಲ್ಲಕ್ಕಿಂತ ದೊಡ್ಡ ಆಫೀಸ್ ಕೋಸ್ಟ್ ಗಾರ್ಡ್ನದ್ದು ಆಗಿತ್ತು.  ಅವರೇ ತಟರಕ್ಷಕ ದಳಕ್ಕೆ ಫೋನಾಯಿಸಿ ಅಲ್ಲಿಗೆ ಡೊರ್ನಿಯರ್  ವಿಮಾನದಲ್ಲಿ ಹೋಗಿಬರುವ ವ್ಯವಸ್ಥೆ ಮಾಡಿದರು.  


An amoeba-like island on the way to Diglipur

Diglipur is the northernmost town in the Andaman Islands.  You will even get away by calling it a village.  The town barely has a few streets and a few thousand population.  But, then it is the biggest in the entire North and Middle Andaman district, even though Mayabunder is the district headquarter.  I have sub-offices here too, and sometimes have to visit them, to monitor the works in progress.  When I was here last, I had decided that if I ever visit this place again on work, I would also attempt to climb the Saddle Peak.  As luck would have it, an opportunity came by to inspect certain emergency works and clear them from financial angle; we thought we might finish it before the onset of monsoon.  Else, it would not be possible to go before end of October. Plus, there were rumours that my transfer might come before time; in addition, my Deputy, Dilip's transfer orders had already arrived and he too wanted to be in Diglipur one last time before his departure to Mumbai. Plans were made quickly, and Dilip took up the responsibility to arrange for the transport (read: plane) through Coast Guard, since he was their de facto financial adviser; also, Coast Guard had the largest office in Diglipur.


ಪೋರ್ಟ್ ಬ್ಲೇರ್ ಗೆ ಬರುವ ಮುನ್ನ ನನಗೆ ಈ ಜಾಗಗಳ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಕೇವಲ ಇಂದಿರಾ ಪಾಯಿಂಟ್ ಬಗ್ಗೆ ಮಾತ್ರ ಗೊತ್ತಿತ್ತು.  ಅಲ್ಲಿಗೆ ಹೋಗಬೇಕೆಂಬ ಆಸೆ ಸಹ ಇತ್ತು.  ಆಗುತ್ತೋ ಇಲ್ಲವೋ ಗೊತ್ತಿರಲಿಲ್ಲ.  ಆದರೆ ದಿಗ್ಲಿಪುರ್, ಮತ್ತು ಅಲ್ಲಿನ ಸ್ಯಾಡ್ಲ್ ಬೆಟ್ಟದ ಬಗ್ಗೆಯಾಗಲಿ ಅಥವಾ ನಾರ್ಕೊಂಡಂ ದ್ವೀಪದ ಬಗ್ಗೆಯಾಗಲಿ ಏನೂ ಅರಿವಿರಲಿಲ್ಲ. ಸ್ಯಾಡ್ಲ್ ಪೀಕ್/ಬೆಟ್ಟ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿನ ಅತಿ ಎತ್ತರದ ಜಾಗ.  ನಾರ್ಕೊಂಡಂ  ದ್ವೀಪದಲ್ಲಿ ಒಂದು ಸುಪ್ತ ಜ್ವಾಲಾಮುಖಿಯೊಂದಿದೆ; ಮತ್ತು ಪ್ರಪಂಚದ ಬೇರೆಲ್ಲಿಯೂ ಕಂಡು ಬಾರದಂತ ಹಾರ್ನ್ ಬಿಲ್ (ಮಂಗಟ್ಟೆ) ಪಕ್ಷಿಯು ಇಲ್ಲಿ ಕಾಣಸಿಗುತ್ತೆ.  ನಾರ್ಕೊಂಡಂ ದ್ವೀಪಕ್ಕೆ  ಹೋಗಲು ಫೆಬ್ರವರಿ ತಿಂಗಳಲ್ಲಿ ಹಮ್ಮಿಕೊಂಡಂಥ ಒಂದು ಕಾರ್ಯಕ್ರಮ ಬೇರೊಂದು ಕೆಲಸದ ಕಾರಣ ಕೈ ಬಿಡಬೇಕಾಯಿತು.  

Before arriving in Port Blair, I didn't have much idea about these places beyond the Capital of the Union Territory, and the Indira Point, the southernmost point of India.  I had not known about Saddle Peak nor about Narkondam, the island which housed a dormant volcano and an endemic species of hornbill named after the island.  Narkondam hornbill is not found anywhere else in the world.  Though a program was made in February to visit Narkondam with the help of Coast Guard and the Forest Department, it had to be dropped at the last minute due to some work related emergencies.  

Saddle Peak sure was not a thing on my bucket list.  Nor had I originally thought of doing it after being posted to the islands.  However, after walking up the Mount Harriet (now, Mount Manipur), the highest point in Port Blair, and Munda Pahad (this one for personally important reasons, which I might divulge another day), the desire to scale the Saddle Peak sprouted unbeknownst.  I have not done any serious climbing in a long while.  The last one was during the covid, when I went with a group to climb up to the Bannanje Falls, in the Western Ghats.  That was some experience.  All through that climb it rained and we were all soaked to the bones.  It was organised - surprisingly - done during the monsoons and one can't expect anything but downpour in the Malnad during that  time. The entire trek had taken about 7 hours for me (I was the oldest in the group, but had finished the earliest).  But, then it was before I contracted covid, not once but three times.  And, before my second knee surgery.  Before my ability to run a 10K went away like the light in darkness suddenly after those bouts of covid.   

ದಿಲೀಪ್ ಫೋನ್ ಮಾಡಿ "ಸರ್, ನಾಳೆ ಬೆಳಿಗ್ಗೆ ೯;೩೦ಕ್ಕೆ ವಿಮಾನ ಹೊರಡುತ್ತೆ.  ಅದಕ್ಕೂ ಮುಂಚೆ ನಿಮ್ಮನ್ನು ವಿಮಾನ ನಿಲ್ದಾಣದ ಡಿ ಐ ಜಿ ಬೆಳಗಿನ ತಿಂಡಿಗೆ ಆಹ್ವಾನಿಸಿದ್ದಾರೆ".  ವಿಮಾನ ಸ್ಥಾನದ ಮುಖ್ಯಸ್ಥರಾದ ಈ ಡಿ ಐ ಜಿ ಅವರ ಕರೆಯೂ ಬಂದಿತ್ತು. "ಸರ್, ಹಿಂದಿನ ಸಲ ನೀವು ಇಲ್ಲಿಂದ ಯಾನ ಮಾಡಿದಾಗ ನಾನಿರಲಿಲ್ಲ. ಈ ಸಲವಾದರೂ ನಿಮ್ಮನ್ನ ಭೇಟಿಯಾಗಬಹುದಾ?" ಎಂದಿದ್ದರು.  ವಿಮಾನ ಹಾರುವ ಮುಂಚೆ ಅವರನ್ನು ಸಂಧಿಸಲು ಒಪ್ಪಿಗೆ ನೀಡಿದ್ದೆ.  

"Good morning Sir".  It was Dilip on the phone.  "Dornier will fly us to Diglipur tomorrow at 9:30AM.  Before that, we have been asked by the Air Station Commandant to join him for breakfast".  There were separate messages from the Commandant too requesting him to join him and I had assented.  "Sir, the last time you had flown out from here, I was away on work.  I hope I get to meet you this time", he had said. 

ದಿಗ್ಲಿಪುರದಲ್ಲಿ ನನಗೆ ನೋಡಲು ಇನ್ನೊಂದು ಜಾಗವಿತ್ತು.  ನೆಲದ ಮೇಲಲ್ಲ.  ಬಾನಿಂದ.  ರೋಸ್ ಮತ್ತು ಸ್ಮಿಥ್ ಎಂಬ ಅವಳಿ ದ್ವೀಪಗಳು ದಿಗ್ಲಿಪುರದ ಸಮುದ್ರದಲ್ಲಿವೆ. ಈ ಎರಡು ದ್ವೀಪಗಳ ನಡುವೆ ಪ್ರಾಕೃತಿಕವಾಗಿ ಮರಳಿನ ಸೇತುವೆಯೊಂದಿದೆ. ಕಡಲು ಉಬ್ಬರಿಸಿದಾಗ (ಹೈ ಟೈಡ್) ಈ ಮರಳಿನ ಸೇತುವೆ ಮುಚ್ಚಿ ಹೋಗುತ್ತೆ. ಉಬ್ಬರ ಇಳಿದಾಗ (ಲೊ ಟೈಡ್) ಮರಳ ಸೇತುವೆ (ಅಥವಾ ಸರಳು/ಪಟ್ಟಿ) ಮರಳಿ ಕಾಣುತ್ತೆ. ಆಗ ಇದರ ಮೇಲೆ ನಡೆದು ಜನ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗಬಹುದು, ಬರಬಹುದು.  ಈ ಎರಡು ಅವಳಿ ದ್ವೀಪಗಳು ಮತ್ತು ಅವುಗಳನ್ನು ಜೊತೆ ಮಾಡುವ ಈ ಮರಳು ಕೊಂಡಿಯನ್ನು ನನಗೆ ಮೇಲಿನಿಂದ ನೋಡಿ, ಅವುಗಳ ಚಿತ್ರ ತೆಗೆಯುವ ಕನಸಿತ್ತು.  ಡಿ ಐ ಜಿಯೊಂದಿಗೆ ಕಲೆತಾಗ ಅವರಿಗೆ ನನ್ನ ಇಚ್ಚೆಯನ್ನು ತಿಳಿಸಿದೆ.  ಅವರು ವಿಮಾನ ಚಾಲಕರನ್ನು ಕರೆದು ಅವರಿಗೆ ಸೂಕ್ತವಾದ ಸೂಚನೆಗಳನ್ನು ಇತ್ತರು.  ನೋಡುವ ಮುಂಚೆಯೇ ನನ್ನ ಆನಂದ ಗಗನ ಮುಟ್ಟಿತ್ತು.  

The ground below from above


I had another place to see in Diglipur.  Not over land.  But from the skies.  Ross and Smith Islands are twin islands, just off the Diglipur coast.  They are connected by a sandbar.  During high tide, this sandbar gets submerged under tidal waters, and during low tide this lays exposed, and allows for people to walk from one island to another.  From the time I learnt about these islands, I so wished to see them - the islands and the sandbar - from the skies, and capture the pictures for my forever memories.  I expressed my desire to the Commandant; he called the pilot over, and gave him suitable instructions regarding the same.  My joy was touching the sky even before we had taken off. 

ಪೋರ್ಟ್ ಬ್ಲೇರ್ ನಿಂದ ದಿಗ್ಲಿಪುರಕ್ಕೆ ರಸ್ತೆ ಇದೆ.  ಎರಡು ಊರುಗಳ ನಡುವಿನ ದೂರ ಕೇವಲ ಮುನ್ನೂರು ಕಿಲೋಮೀಟರ್ ಆದರೂ ರಸ್ತೆ ಚೆನ್ನಾಗಿಲ್ಲದ ಕಾರಣ, ದಿನವೆಲ್ಲ ಪ್ರಯಾಣ ಮಾಡಬೇಕು ತಲುಪಲು.  ಹಾಗೂ, ಜರಾವಾ ಬುಡಕಟ್ಟು ಜನ ಇರುವ ಕಾಡಿನ ಮೂಲಕ ಸಾಗುವುದರಿಂದ ನಾವು (ಯಾರಾದರೂ ಸಹ) ಅರಣ್ಯ ಇಲಾಖೆ ಮತ್ತು ಪೊಲೀಸ್ ಬೆಂಗಾವಲಿನೊಂದಿಗೆ ಮಾತ್ರ ಸಂಚರಿಸಬೇಕು.  ಆದ್ದರಿಂದ, ಕೆಲಸದ ನಿಮಿತ್ತ ದಿಗ್ಲಿಪುರ ಅಥವಾ ಮಯಬಂದರ್ ಕೇವಲ ವಿಮಾನದಲ್ಲಿ ಹೋಗುವುದೇ  ಸೂಕ್ತ ಆಗಿತ್ತು.  ವಿಮಾನದಲ್ಲಿ ಈ ಪ್ರಯಾಣ ಕೇವಲ ಮುಕ್ಕಾಲು ಅಥವಾ ಒಂದು ಗಂಟೆಯಲ್ಲಿ ಮುಗಿಯುತ್ತೆ. ಹೆಚ್ಚಿನ ಎತ್ತರದಲ್ಲಿ ಹಾರದ ಕಾರಣ, ಸುತ್ತಲಿನ ದ್ವೀಪ, ಸಮುದ್ರವನ್ನು ನೋಡುತ್ತಾ ಹೋಗುವುದು ಕೂಡ ಆಹ್ಲಾದಕರ ಅನುಭವ.  

One could go to Diglipur from Port Blair by road too.  The distance between the two is just over 300 km.  However, the road is generally in terrible condition, and it takes an entire day to traverse this distance.  Also, one has to go through the restrict tribal area of the Jarawas, where one has to only travel along with the convoy of the police and the forest department.  Hence, if there is work to attend to in Diglipur or Mayabunder, it is best to fly (since one is entitled to). It also is an exhilerating experience to watch the seas and the islands from above as you fly.  

ದಿಗ್ಲಿಪುರದ ವಿಮಾನ ನಿಲ್ದಾಣ ದಾಟಿ ಕೊಂಚ ಮುಂದಕ್ಕೆ ಹೋದರೆ ಅವಳಿ ದ್ವೀಪಗಳು ಕಾಣುತ್ತವೆ. ಅವು ಕಾಣುತ್ತಿದ್ದಂತೆಯೇ, ಮುಂದೆಯೇ ಕೊಟ್ಟ ಸೂಚನೆಯಂತೆ ವಿಮಾನ ಚಾಲಕ ವಿಮಾನವನ್ನು ಆರು ಸಾವಿರ ಅಡಿಗಳಿಂದ ಕೇವಲ ಎರಡು ಸಾವಿರ ಅಡಿಗಳಿಗೆ  ಇಳಿಸಿದರು. ಈ ಅವಳಿ ದ್ವೀಪಗಳು ಮತ್ತು ಮರಳ ಸೇತುವೆಯನ್ನು ನೋಡುವ ಆನಂದ ನಂಗೆ ವರ್ಣಿಸೋಕೆ ಬರಲ್ಲ.  ಇಲ್ಲಿಯೇ ಕೆಲವು ಚಿತ್ರಗಳನ್ನು ಇರಿಸುತ್ತೇನೆ.  ನೀವೇ ನೋಡಿ ತಿಳ್ಕೊಬಹುದು, ಎಷ್ಟು ಚೆನ್ನಾಗಿದೆ ಅಂತ.  ಇವುಗಳ ಚಿತ್ರ ಹಿಡಿಯಲು ನಾನು ಇನ್ನೊಬ್ಬರಿಂದ ಕ್ಯಾಮೆರಾ ಎರವಲು ತಂದಿದ್ದೆ.  ನನ್ನ ಕ್ಯಾಮೆರಾದಲ್ಲಿ ಫಂಗಸ್ ಬೆಳೆದಿತ್ತು; ಆ ಕಾರಣ ಕ್ಯಾಮೆರಾ ಮತ್ತು ಲೆನ್ಸ್ ರಿಪೇರಿಗಾಗಿ ಬೆಂಗಳೂರು ಸೇರಿದ್ದವು. ಎರವಲು ಪಡೆದ ಕ್ಯಾಮೆರಾ ಅಷ್ಟು ಚೆನ್ನಾಗಿರಲಿಲ್ಲ, ಆದ್ರೂ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಚಿತ್ರಗಳನ್ನು ಹಿಡಿದೆ.  ಸುಮಾರ್ ೧೦ ನಿಮಿಷ ವಿಮಾನವನ್ನು ದ್ವೀಪಗಳ ಸುತ್ತಲೇ ನಮಗಾಗಿ ಹಾರಿಸಿದ್ದರಿಂದ ನನಗೆ ಕಣ್ಣು ಮನಸ್ಸು ತುಂಬುವಷ್ಟು ಅವನ್ನೇ ನೋಡಿ ಕಾಲ ಕಳೆದೆ.  

Ross and Smith Islands 



The plane must go beyond the Diglipur Air Station to view the islands from air.  As we approached the twin islands, the pilot brought down the aircraft to a lower altitude, as had been advised. The sight of the islands and the connecting sandbar is out of the world.  It was low tide, and one could clearly see the exposed sandbar connecting the two islands, Ross and Smith.  I had borrowed a camera from a friend to click pictures, as my camera and lenses were fungus infected and I had given them for servicing in Bengaluru. The camera I had borrowed was not great, but I clicked as many pics as possible.  I soaked up the sight to a great extent, as the pilot circled around the islands for a while.  I would simply upload pictures than describe their beauty.  

Can't get enough of the beauty. 


ವಿಮಾನದಿಂದ ಇಳಿದು ವಸತಿ ಮನೆಗೆ ಹೋಗಿ ಕೊಂಚ ವಿಶ್ರಮಿಸಿ ಆ ದಿನದ ಎಲ್ಲ ಕೆಲಸಗಳನ್ನ  ಮಾಡಿದ್ದಾಯಿತು.  ಆ ನಂತರ, ಇನ್ನೂ ಬೆಳಕಿದ್ದ ಕಾರಣ ಹತ್ತಿರದ ಕಡಲ ತೀರವೊಂದಕ್ಕೆ ಹೋಗಿ ಬಂದೆವು.  ಅಲ್ಲಿಂದ ನಾವು ಹತ್ತಬೇಕೆಂದುಕೊಂಡಿದ್ದ ಗುಡ್ಡ ಕಾಣುತ್ತಿತ್ತು.  "ಒಹ್ ಇಷ್ಟೇ ಎತ್ತರ ಇರೋದು.  ಭಾರಿ ಸುಲಭ"  ಆದ್ರೆ ನಮ್ಮ ಕಾರ್ ಡ್ರೈವರ್ ಮತ್ತು ಇತರರನ್ನು ಕೇಳಿದರೆ, ಹತ್ತಿ ಇಳಿಯಲು ಇಡೀ ದಿನವೇ ಬೇಕು ಅಂತ ಹೇಳಿದ್ರು.  ನಮಗಿಂತ ಮುಂಚೆ ಹೋಗಿದ್ದೆ ಇನ್ನೊಬ್ಬ ಅಧಿಕಾರಿ ಕೂಡ ಇದೆ ರೀತಿ ಹೇಳಿದ್ದ.  ನನಗೆ ನಂಬಲು ಕಷ್ಟ ಆಯಿತು.  "ಸರಿ ನನ್ನ ಮುಖ ನೋಡಿ ವಯಸ್ಸಾಗಿದೆ ಅಂತ ಈ ಥರ ಹೇಳ್ತ ಇದ್ದಾರೆ." ಅಂತ ಯೋಚನೆ ಮಾಡಿ ಸುಮ್ಮನಾದೆ.  


Kalipur Beach with Saddle Peak in the background



Once the flight landed, we moved immediately to the guesthouse.  After resting for a while, we got all the work we had come for completed.  Since there was still time for the sunset, we decided to visit a nearby beach, called Kalipur beach.  One could see the hillock we had planned to climb the next day.  "It's a piddly, little tor.  It would be a cakewalk", I thought.  However, our driver and others that we spoke to said it would take the entire day to scale and return.  Even another officer who had previously climbed it echoed the same sentiments.  I could not believe their words.  I assumed they were saying so because of my age and possible inability/infirmity.  

ಕತ್ತಲಾದ ನಂತರ ನನಗೆ ನಾಳೆ ಹತ್ತುವುದೋ ಬೇಡವೋ ಎಂಬ ಆಲೋಚನೆ ಮೊದಲಾಯಿತು.  ಮೋಡ ಕವಿದಿತ್ತು.  ಯಾವಾಗಲಾದರೂ ಮಳೆ ಬರೋ ಸಾಧ್ಯತೆ ಕಾಣಿಸ್ತಿತ್ತು.  ಮಳೆಯಲ್ಲಿ ಬೆಟ್ಟ ಹತ್ತೋದು ಕಷ್ಟ ಮಾತ್ರ ಅಲ್ಲ, ಪ್ರಮಾದಕಾರಿ ಕೂಡ.  "ಹೊರಡೋಕೆ ಮುಂಚೆ ಮಳೆ ಕಾಣಿಸಿದರೆ ಹತ್ತೋ ಯೋಚನೆ ಬಿಟ್ಟು ಇಲ್ಲೇ ಇರೋಣ.  ದಟ್ಟ ಮೋಡ ಇಲ್ಲದೆ ಹೋದರೆ ಹೊರಡೋಣ" ಅಂತ ನಿರ್ಧರಿಸಿದೆ.  ಎಲ್ಲಕ್ಕಿಂತ ಹೆಚ್ಚಾಗಿ, ಬೆಳಿಗ್ಗೆ ನಾಲ್ಕಕ್ಕೆ ಎದ್ದು ತಯಾರಾಗಿ ಹೊರಡೋ ಯೋಚನೆ  ಭಯಂಕರವಾಗಿತ್ತು.  ಬೆಳಿಗ್ಗೆ ಬೇಗ ಏಳುವುದೇ ನನಗೆ ಯಾವತ್ತೂ ಇಷ್ಟವಿಲ್ಲದ ಕೆಲಸ.  "ಯಾರು ಈ ಸೂರ್ಯೋದಯ ಅನ್ನೋದನ್ನ ಕಂಡು ಹಿಡಿದ್ರೋ, ಯಾಕೆ ಈ ಬ್ರಾಹ್ಮೀ ಮುಹೂರ್ತ ತುಂಬಾ ಒಳ್ಳೆ ಸಮಯ ಅಂತ ಹೇಳ್ತಾರೋ" ಅಂತ ತುಂಬಾ ಸಲ ಬೈಕೊಂಡಿದ್ದೀನಿ.  

Once the darkness set in, the mind too began having second thoughts about the climb.  There were dark clouds in the sky, and it looked like it could rain anytime.  Trekking when it rains is neither easy nor desired. Above all, waking up at 4 in themorning and getting ready for the trek appeared the most daunting. I hate waking up early in the morning.  Each time I have to wake up early, I have cursed the situation that necessitated it.  "I will stay back if it rains before we start in the morning", I resolved.  

ವಸತಿ ಮನೆಯ ಸಹಾಯಕ "ಬೆಳಿಗ್ಗೆಗೆ ಬುತ್ತಿ ಕಟ್ಟಿ ಕೊಡ್ತೀನಿ ಸರ್.  ಏನು ಬೇಕು?" ಅಂದ.  ಈ ಉಸ್ತುವಾರಿ ಎಲ್ಲ ದಿಲೀಪ್ ಅವರೇ  ನೋಡಿಕೊಳ್ಳೋದು ಒಳ್ಳೇದು ಅನ್ನಿಸ್ತು.  ಹಾಗೆ ಹೇಳಿದೆ.  ನಮ್ಮೊಂದಿಗೆ ಇನ್ನೊಬ್ಬ ಅಧಿಕಾರಿಯನ್ನು ಕಳಿಸುವೆ ಎಂದು ಇಲ್ಲಿಯ ಉಸ್ತುವಾರಿ ಅಧಿಕಾರಿ ಹೇಳಿದ್ದರು.  ನಮ್ಮ ಬುತ್ತಿ ಎತ್ತಿಕೊಂಡು ಜೊತೆಗೆ  ಬರೋದಕ್ಕೆ ಇನ್ನೊಬ್ಬ ಹುಡುಗನ್ನೂ ನೇಮಿಸಿದ್ದರು. ನಮ್ಮ ಜೊತೆ ಬರೋಕೆ ನೇಮಿಸಿದ್ದ ಅಧಿಕಾರಿ ಇನ್ನೂ ಚಿಕ್ಕ ಹುಡುಗನಾಗಿದ್ದ.  ಅವನು ಬಂದು, "ಸರ್ ಬೆಳಿಗ್ಗೆ ೫ ಗಂಟೆಗೆಲ್ಲ ತಯಾರಾಗಿರಿ. ಪೂರ್ತಿ ತೋಳಿನ ಅಂಗಿ ಧರಿಸಿ, ಹಾಗೆಯೆ ಪ್ಯಾಂಟ್ ಹಾಕಿಕೊಂಡು ಬನ್ನಿ.  ಶಾರ್ಟ್ಸ್ ಬೇಡ.  ಬೆಟ್ಟದಲ್ಲಿ ಹಾವುಗಳಿರುವ ಸಾಧ್ಯತೆ ಜಾಸ್ತಿ" ಅಂತ ಹೇಳಿ ಹೋದ.  ಇದೊಂದೇ ಬಾಕಿ ಇತ್ತು, ಅಂತ ಅನ್ನಿಸ್ತು.  ಬೇಗ ಮಲಗಿದರೂ ನಿದ್ದೆ ಸುಳಿಯಲಿಲ್ಲ.  ರಾತ್ರಿಯೆಲ್ಲಾ ಒದ್ದಾಟದಲ್ಲೇ ಕಳೆದಿತ್ತು.  ನಾಲ್ಕು ಗಂಟೆಗೆ ಅಲಾರ್ಮ್ ಬಡ್ಕೊಂಡಾಗ ಏಳೋ ಮನಸ್ಸಂತೂ ಇರ್ಲಿಲ್ಲ.    

The guesthouse attendant asked what food we wanted to be packed for the trek.  I thought and felt it was best to leave all these responsibilities to Dilip, We were informed that an officer would come along with us as the guide to climb the peak; there would be another boy to carry our food pack up the mountain.  Saksham, the officer who was assigned to come along, was young and new in service.  "Sir, please be ready by 5.  Let us leave before it is sunrise.  The earlier we start the better and we could avoid the hot sun in the mid day.  Also, please wear full sleeved shirt, and trousers; no shorts.  There is a possibility that we might encounter snakes in the mountain", he instructed as he left.  Well, this was the only thing left to scare us with.  Even though I retired to bed early, sleep wouldn't come anywhere near.  I tossed and turned through the night, and possibly slept well after midnight.  When the alarm rang at 4, I was not inclined to leave the bed.  


(ಮುಂದುವರೆಯುವುದು.....)

(To be Continued.....)




Tuesday, July 02, 2024

Nostalgia

 His ‘google photos’ threw up pics from old days as memories for the day. Of him, and his ex, and a few other friends. His mind wandered back. As a coincidence, that day, two other couples had rung in and asked if they could drop in.  

Having just celebrated their anniversary of togetherness, love was still thick in the air, and they readily agreed to have friends over for a few drinks. Since the house was recently done up, everyone took turns to get themselves clicked with the painting he had recently made and hung over the wall. Those pics today stirred something in him. He sent some of the pics to one of the couples that had come calling. The other couple - just like he and his ex - had parted ways. 

The response came almost immediately. Not a message but a call. Both the husband and wife were speaking animatedly over the speaker, “Wow! It’s been such a long time”. 

“Yes, it was ten years ago!”

“Ten years! No wonder I look so weird in the pic”, quips the wife. 

“Not that she’s any less weird now”, rubs in the husband. 

“A different kind of weird maybe”, he says. They all share the laughter. 

“Only after having moved away from the country have we realised how much we miss hanging out with you”, says the wife. And the husband adds in his approval. 

“We get busy with our lives, and think we could meet another day, maybe tomorrow, maybe next week; but that another day never comes”, he says wistfully. The couple agree. 


#veryshortstories

#tinytales