Mother
ಮನದಲ್ಲಿರಲಿ ಏನೇ
ದುಗುಡ ದುಮ್ಮಾನ
ಜಗವೆಲ್ಲ ಹರಡಿರಲಿ
ಬರಿದೆ ಮೌನ
ಅವಳ ನಗು ಸಾಕು
ತರಲು ಸಾಂತ್ವನ
ನೋಟವೊಂದೇ ತುಂಬಿಹುದು
ಮನಕ್ಕೆ ಚೇತನ
ಹಸಿದಾಗ ಮುನಿದಾಗ
ದಣಿದಾಗ ಕುಣಿದಾಗ
ಬರುವ ಮೊದಲ ಪದ
ಮೊದಲ ಬಾರಿ
ಅತ್ತಾಗಲೂ ಅಚ್ಚರಿಗೂ
ಬಿದ್ದರೂ ಎದ್ದರೂ
ಎಲ್ಲಕ್ಕೂ ನಾಲಿಗೆಯಲ್ಲಿ
‘ಅಮ್ಮಾ' ಅಮ್ಮ
Labels: Amma, Kannada, Kannada poetry, mother, mothers day, poem